ನವದೆಹಲಿ: ಲಿಥಿಯಂ-ಅಯಾನ್ ಬ್ಯಾಟರಿ ಬೆಲೆಗಳಲ್ಲಿ ಇಳಿಕೆ ಆಗಿರುವುದರಿಂದ, ವಿದ್ಯುತ್ ಚಾಲಿತ ವಾಹನಗಳನ್ನು ಈಗ ಸಬ್ಸಿಡಿ ಇಲ್ಲದೆ ನಿರ್ವಹಿಸಬಹುದು. ಆದರೆ ವಿದ್ಯುತ್ ಚಾಲಿತ ವಾಹನಗಳಿಗೆ ಪ್ರೋತ್ಸಾಹ ನೀಡುವ ಅಗತ್ಯವಿದೆಯೇ ಎಂಬುದನ್ನು ಹಣಕಾಸು ಮತ್ತು ಭಾರಿ ಕೈಗಾರಿಕೆಗಳ ಸಚಿವಾಲಯಗಳು ನಿರ್ಧರಿಸಬೇಕಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ನಿತಿನ್ ಗಡ್ಕರಿ ಸೋಮವಾರ ಹೇಳಿದ್ದಾರೆ.