ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇ–ವೇ ಬಿಲ್‌: ಆಗಸ್ಟ್‌ 15ರಿಂದ ರಿಟರ್ನ್ಸ್‌ ಸಲ್ಲಿಕೆ ಕಡ್ಡಾಯ

Last Updated 5 ಆಗಸ್ಟ್ 2021, 13:32 IST
ಅಕ್ಷರ ಗಾತ್ರ

ನವದೆಹಲಿ: ಈ ವರ್ಷದ ಜೂನ್‌ವರೆಗೆ ಸತತ ಎರಡು ತಿಂಗಳಿಂದ ಜಿಎಸ್‌ಟಿ ರಿಟರ್ನ್ಸ್‌ ಸಲ್ಲಿಸದೇ ಇದ್ದರೆ ಆಗಸ್ಟ್‌ 15ರ ನಂತರ ಇ–ವೇ ಬಿಲ್‌ ಸೃಷ್ಟಿಸಲು ಸಾಧ್ಯವಾಗುವುದಿಲ್ಲ ಎಂದು ಜಿಎಸ್‌ಟಿಎನ್‌ (ಜಿಎಸ್‌ಟಿ ನೆಟ್‌ವರ್ಕ್) ಹೇಳಿದೆ.

ಬಾಕಿ ಇರುವ ಜಿಎಸ್‌ಟಿ ರಿಟರ್ನ್‌ಗಳನ್ನು ತೆರಿಗೆ ಪಾವತಿದಾರರು ಆಗಸ್ಟ್‌ನಲ್ಲಿ ಸಲ್ಲಿಸುವ ನಿರೀಕ್ಷೆ ಇರುವುದರಿಂದ, ಸರಕು ಮತ್ತು ಸೇವಾ ತೆರಿಗೆ ಸಂಗ್ರಹವನ್ನು ಹೆಚ್ಚಿಸಲು ಈ ನಿರ್ಧಾರವು ಸಹಾಯ ಮಾಡಲಿದೆ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕೋವಿಡ್‌ ಸಾಂಕ್ರಾಮಿಕದ ಕಾರಣದಿಂದಾಗಿಪರೋಕ್ಷ ತೆರಿಗೆ ಮತ್ತು ಕಸ್ಟಮ್ಸ್‌ನ ಕೇಂದ್ರೀಯ ಮಂಡಳಿಯು (ಸಿಬಿಐಸಿ) ರಿಟರ್ನ್ಸ್‌ ಸಲ್ಲಿಸದೇ ಇದ್ದರೂ ಇ–ವೇ ಬಿಲ್‌ ತಡೆಹಿಡಿಯುವುದನ್ನು ತಾತ್ಕಾಲಿಕವಾಗಿ ನಿಲ್ಲಿಸಿತ್ತು.

ಸರ್ಕಾರವುಇದೀಗ, ರಿಟರ್ನ್ಸ್‌ ಸಲ್ಲಿಸದವರಿಗೆ ಇ–ವೇ ಬಿಲ್‌ಗಳನ್ನುಮತ್ತೆ ತಡೆಹಿಡಿಯುವ ನಿರ್ಧಾರಕ್ಕೆ ಬಂದಿದೆ. ಆಗಸ್ಟ್‌ 15ರಿಂದ ಅದು ಜಾರಿಗೆ ಬರಲಿದೆ ಎಂದು ಸಿಬಿಐಸಿ ಹೇಳಿದೆ.

ಜಿಎಸ್‌ಟಿ ವ್ಯವಸ್ಥೆಯಲ್ಲಿ ₹ 50 ಸಾವಿರಕ್ಕಿಂತ ಹೆಚ್ಚಿನ ಮೌಲ್ಯದ ಸರಕುಗಳಿಗೆ ಇ–ವೇ ಬಿಲ್‌ ಪಡೆಯುವುದು ಕಡ್ಡಾಯ. ಆದರೆ, ಚಿನ್ನಕ್ಕೆ ವಿನಾಯಿತಿ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT