ಮಂಗಳವಾರ, 10 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಭಾರತದ ಆರ್ಥಿಕ ಮುನ್ನೋಟ ಸ್ಥಿರ

Published 29 ಆಗಸ್ಟ್ 2024, 14:24 IST
Last Updated 29 ಆಗಸ್ಟ್ 2024, 14:24 IST
ಅಕ್ಷರ ಗಾತ್ರ

ನವದೆಹಲಿ: ಆರ್ಥಿಕ ಶಿಸ್ತು ಕಾಯ್ದುಕೊಳ್ಳುವಲ್ಲಿ ಭಾರತಕ್ಕೆ ನೀಡಿರುವ ಆರ್ಥಿಕ ಮುನ್ನೋಟದ ಸ್ಥಾನಮಾನದಲ್ಲಿ ಜಾಗತಿಕ ಸಾಲ ಮೌಲ್ಯಮಾಪನ ಸಂಸ್ಥೆ ಫಿಚ್‌ ಯಥಾಸ್ಥಿತಿ ಕಾಯ್ದುಕೊಂಡಿದೆ.

ದೇಶದಲ್ಲಿ ವಿತ್ತೀಯ ಕೊರತೆ ಪ್ರಮಾಣ ಹೆಚ್ಚುತ್ತಿರುವುರಿಂದ 2006ರ ಆಗಸ್ಟ್‌ನಲ್ಲಿ ಕನಿಷ್ಠ ಹೂಡಿಕೆ ಮಾನದಂಡವನ್ನು (ಬಿಬಿಬಿ ಮೈನಸ್‌) ನೀಡಿತ್ತು. ಸದ್ಯ ಇದರಲ್ಲಿ ಬದಲಾವಣೆ ಮಾಡಿಲ್ಲ.

‌ದೇಶದ ಮಧ್ಯಮಾವಧಿ ಬೆಳವಣಿಗೆಯು ದೃಢವಾಗಿದೆ. ಇದು ವಿತ್ತೀಯ ಹೊಣೆಗಾರಿಕೆ ನಿಭಾಯಿಸಲು ಸಹಕಾರಿಯಾಗಲಿದೆ. ಜೊತೆಗೆ, ಜಾಗತಿಕ ಆರ್ಥಿಕತೆಯಲ್ಲಿ ಭಾರತದ ಜಿಡಿಪಿ ಪಾಲು ಹೆಚ್ಚಳಕ್ಕೆ ನೆರವಾಗಲಿದೆ ಎಂದು ಹೇಳಿದೆ.

‘ಬಿಬಿಬಿ’ ಮಾನದಂಡ ಹೊಂದಿರುವ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತದ ವಿತ್ತೀಯ ನಿರ್ವಹಣೆ ದುರ್ಬಲವಾಗಿದೆ. ಸಾಲದ ಹೊರೆಯ ಪರಿಣಾಮ ಸಾಲ ಮರುಪಾವತಿ ಸಾಮರ್ಥ್ಯವು ಕುಗ್ಗಿದೆ ಎಂದು ಹೇಳಿದೆ.

ಶೇ 7.2ರಷ್ಟು ಜಿಡಿಪಿ ಪ್ರಗತಿ: ಮೂಡಿಸ್‌

ಮೂಡಿಸ್‌ ಇನ್‌ವೆಸ್ಟರ್ಸ್‌ ಸರ್ವಿಸಸ್‌ ಸಂಸ್ಥೆಯು ಭಾರತದ ಜಿಡಿಪಿ ಬೆಳವಣಿಗೆಯನ್ನು ಪರಿಷ್ಕರಿಸಿದೆ. 2024ನೇ ಕ್ಯಾಲೆಂಡರ್‌ ವರ್ಷದಲ್ಲಿ ಶೇ 7.2ರಷ್ಟು ಹಾಗೂ 2025ನೇ ಕ್ಯಾಲೆಂಡರ್‌ ವರ್ಷದಲ್ಲಿ ಶೇ 6.6ರಷ್ಟು ಪ್ರಗತಿ ಕಾಣಲಿದೆ ಎಂದು ಅಂದಾಜಿಸಿದೆ. ದಿನಬಳಕೆಯ ಸರಕು ಮತ್ತು ಸೇವೆಯಲ್ಲಿನ ವೆಚ್ಚದ ಏರಿಕೆಯಿಂದಾಗಿ ಈ ಪ್ರಗತಿ ಸಾಧ್ಯವಾಗಲಿದೆ‌. ಬಡ್ಡಿದರ ನಿರುದ್ಯೋಗ ಆಧಾರಿತ ಸ್ಥೂಲ ಆರ್ಥಿಕ ಸ್ಥಿತಿಯು ಉತ್ತಮವಾಗಿದೆ. ಚಿಲ್ಲರೆ ಹಣದುಬ್ಬರ ಮಂದಗತಿಯಲ್ಲಿದೆ ಎಂದು ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT