ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

9 ಬ್ಯಾಂಕ್‌ಗಳ ಮುನ್ನೋಟ ಪರಿಷ್ಕರಣೆ

ಸ್ಥಿರತೆಯಿಂದ ನಕಾರಾತ್ಮಕ; ಫಿಚ್‌ ರೇಟಿಂಗ್ಸ್‌
Last Updated 22 ಜೂನ್ 2020, 12:42 IST
ಅಕ್ಷರ ಗಾತ್ರ

ನವದೆಹಲಿ: ದೇಶದ ಒಂಬತ್ತು ಬ್ಯಾಂಕ್‌ಗಳ ಮುನ್ನೋಟವನ್ನು ಜಾಗತಿಕ ರೇಟಿಂಗ್‌ ಕಂಪನಿ ಫಿಚ್‌ ಸ್ಥಿರತೆಯಿಂದ ನಕಾರಾತ್ಮಕತೆಗೆ ಪರಿಷ್ಕರಿಸಿದೆ.

‘ಕೊರೊನಾ–2’ ವೈರಾಣು ಪಿಡುಗಿನ ಪ್ರತಿಕೂಲ ಪರಿಣಾಮಗಳಿಂದ ಭಾರತದ ರೇಟಿಂಗ್‌ ಮುನ್ನೋಟವನ್ನು ತಗ್ಗಿಸಿರುವುದರಿಂದ ಸರ್ಕಾರಿ ಮತ್ತು ಖಾಸಗಿ ಬ್ಯಾಂಕ್‌ಗಳ ಮುನ್ನೋಟವನ್ನೂ ಪರಿಷ್ಕರಿಸಲಾಗಿದೆ.

ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ, ಆಮದು – ರಫ್ತು ಬ್ಯಾಂಕ್‌ (ಎಕ್ಸಿಂ), ಬ್ಯಾಂಕ್‌ ಆಫ್‌ ಬರೋಡಾ, ಬ್ಯಾಂಕ್‌ ಆಫ್‌ ಇಂಡಿಯಾ, ಕೆನರಾ ಬ್ಯಾಂಕ್‌, ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌, ಐಸಿಐಸಿಐ ಬ್ಯಾಂಕ್‌, ಐಡಿಬಿಐ ಬ್ಯಾಂಕ್‌ ಮತ್ತು ಆ್ಯಕ್ಸಿಸ್‌ ಬ್ಯಾಂಕ್‌ಗಳ ಮುನ್ನೋಟವನ್ನು ಪರಿಷ್ಕರಿಸಲಾಗಿದೆ.

ಬ್ಯಾಂಕ್‌ಗಳಿಗೆ ಕೇಂದ್ರ ಸರ್ಕಾರವು ಹಣಕಾಸು ನೆರವು ಒದಗಿಸುವ ಸಾಧ್ಯತೆಯ ಕಾರಣಕ್ಕೆ ಅವುಗಳ ಮುನ್ನೋಟ ಪರಿಷ್ಕರಿಸಲಾಗಿದೆ. ಹಣಕಾಸು ನೆರವು ಕಲ್ಪಿಸಲು ಸರ್ಕಾರಕ್ಕೆ ಸಂಪನ್ಮೂಲದ ಕೊರತೆ ಇರುವುದರಿಂದ ಫಿಚ್‌ ಈ ನಿರ್ಧಾರಕ್ಕೆ ಬಂದಿದೆ.

ರೇಟಿಂಗ್‌ ಕಂಪನಿಯು ಕಳೆದ ವಾರ ಭಾರತದ ಮುನ್ನೋಟವನ್ನು ಸ್ಥಿರತೆಯಿಂದ (‘ಬಿಬಿಬಿ–’ನಿಂದ) ನಕಾರಾತ್ಮಕಕ್ಕೆ ಪರಿಷ್ಕರಿಸಿತ್ತು. ಈ ಮುನ್ನೋಟವು ಅತ್ಯಂತ ಕಡಿಮೆ ಹೂಡಿಕೆ ದರ್ಜೆಯದಾಗಿದೆ.

ಹಣಕಾಸು ಉತ್ತೇಜನದ ಇನ್ನೊಂದು ಕೊಡುಗೆ?

ಮುಂಬರುವ ದಿನಗಳಲ್ಲಿ ಭಾರತ ಸರ್ಕಾರವು ಇನ್ನೊಂದು ಹಣಕಾಸು ಕೊಡುಗೆ ಪ್ರಕಟಿಸಲಿದ್ದು, ಇದು ಜಿಡಿಪಿಯ ಶೇ 1ರಷ್ಟು ಇರಲಿದೆ ಎಂದು ಫಿಚ್‌ ರೇಟಿಂಗ್ಸ್‌ ತಿಳಿಸಿದೆ.

’ಕೋವಿಡ್‌ ಪಿಡುಗಿನ ಪ್ರಭಾವ ಮುಂದುವರೆದಿರುವುದರಿಂದ ಆರ್ಥಿಕತೆಗೆ ಬೆಂಬಲ ನೀಡಲು ಕೇಂದ್ರ ಸರ್ಕಾರವು ಇನ್ನಷ್ಟು ಹಣಕಾಸಿನ ನೆರವು ಘೋಷಿಸುವ ಸಾಧ್ಯತೆ ಇದೆ’ ಎಂದು ಕಂಪನಿಯ ನಿರ್ದೇಶಕ ಥಾಮಸ್‌ ರೂಕ್‌ಮಾಕರ್‌ ಹೇಳಿದ್ದಾರೆ.

‘ತನ್ನ ಸಾಲದ ಅಗತ್ಯ ಪೂರೈಸಿಕೊಳ್ಳಲು ಸರ್ಕಾರ ಬಾಂಡ್‌ಗಳನ್ನೂ ಪ್ರಕಟಿಸಬಹುದು. ಬಾಂಡ್‌ಗಳ ಮೊತ್ತವು ಜಿಡಿಪಿಯ ಶೇ 2ರಷ್ಟು ಇರಬಹುದು. ಜಿಡಿಪಿಯ ಶೇ 1ರಷ್ಟು ಹೊಸ ಕೊಡುಗೆಯು ಪ್ರಕಟಗೊಂಡರೆ ಹಣಕಾಸಿನ ನೆರವು ಅಗತ್ಯ ಇದ್ದವರಿಗೆ ನೆಮ್ಮದಿ ನೀಡಲಿದೆ’ ಎಂದು ಥಾಮಸ್‌ ಅವರು ಕಂಪನಿಯ ಆನ್‌ಲೈನ್‌ ಸಂವಾದ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT