ಕೆಎಸ್‌ಡಿಸಿ ಜೊತೆಗೆ ಫ್ಲಿಪ್‌ಕಾರ್ಟ್ ಒಪ್ಪಂದ

ಬೆಂಗಳೂರು: ಲಾಜಿಸ್ಟಿಕ್ ಉದ್ಯಮದ ಕೌಶಲ ಕೊರತೆ ನಿವಾರಿಸಲು ಫ್ಲಿಪ್‌ಕಾರ್ಟ್ ಸಂಸ್ಥೆಯು ಕರ್ನಾಟಕ ಕೌಶಲ ಅಭಿವೃದ್ಧಿ ಮಂಡಳಿ (ಕೆಎಸ್‌ಡಿಸಿ) ಮೂಲಕ ಸ್ಥಾಪಿಸಿರುವ ಲಾಜಿಸ್ಟಿಕ್ಸ್ ಕೌಶಲ ವಲಯ ಕೇಂದ್ರದೊಂದಿಗೆ (ಎಸ್‌ಎಲ್‌ಸಿ) ಒಪ್ಪಂದ ಮಾಡಿಕೊಂಡಿದೆ.
ಇದರ ಭಾಗವಾಗಿ ಇ-ಕಾಮರ್ಸ್ ಉದ್ಯಮಕ್ಕಾಗಿ ನುರಿತ ಮತ್ತು ತರಬೇತಿ ಪಡೆದ ಕಾರ್ಯಪಡೆಯೊಂದನ್ನು ನಿರ್ಮಿಸಲು ಫ್ಲಿಪ್‌ಕಾರ್ಟ್ ‘ಉತ್ಕೃಷ್ಠತೆಯ ಕೇಂದ್ರ’ (ಸಿಒಇ) ಆರಂಭಿಸಿದೆ. ಇದು ಪದವಿ ಪೂರ್ವ ವಿದ್ಯಾಭ್ಯಾಸಕ್ಕೆ ಸಮಾನವಾಗಿರಲಿದೆ.
ಲಾಜಿಸ್ಟಿಕ್ಸ್ ಉದ್ಯಮದಲ್ಲಿ ಕೆಲಸ ಮಾಡಲು ಬಯಸುವ ಆಕಾಂಕ್ಷಿಗಳಿಗೆ ಈ ಕೇಂದ್ರ ಮುಕ್ತವಾಗಿದೆ. ನಗರದಲ್ಲಿ ಇ–ಕಾಮರ್ಸ್ ಪೂರೈಕೆ ಸರಪಳಿ, ಅಭ್ಯರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ತರಬೇತಿ ನೀಡಲಾಗುವುದು.
ತರಬೇತಿ ಪಡೆಯುವ ಆಯ್ದ ಅಭ್ಯರ್ಥಿಗಳು ಫ್ಲಿಪ್ಕಾರ್ಟ್ನೊಂದಿಗೆ ಅಪ್ರೆಂಟಿಸ್ಶಿಪ್ ಕಾರ್ಯಕ್ರಮಕ್ಕೆ ಸೇರಲು ಅವಕಾಶ ಪಡೆಯಲಿದ್ದಾರೆ. 60 ದಿನಗಳ ತರಬೇತಿ ಇ-ಕಾಮರ್ಸ್ ಕ್ಷೇತ್ರದಲ್ಲಿ ಉದ್ಯೋಗಾವಕಾಶವನ್ನು ಹೆಚ್ಚಿಸಲಿದೆ.
ತರಬೇತಿ ಪೂರ್ಣಗೊಳಿಸಿದ ಅಭ್ಯರ್ಥಿಗಳು ರಾಷ್ಟ್ರೀಯ ಕೌಶಲ ಅರ್ಹತಾ ಫ್ರೇಂವರ್ಕ್‌ನಡಿ (ಎನ್‌ಎಸ್‌ಎಫ್‌ಕ್ಯೂ) ಪ್ರಮಾಣ ಪತ್ರ ಪಡೆಯಲಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.