ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫ್ಲಿಪ್‌ಕಾರ್ಟ್, ಡಿಜಿಟ್ ಇನ್ಶುರೆನ್ಸ್‌ನ ಆರೋಗ್ಯ ವಿಮೆ

Last Updated 10 ಏಪ್ರಿಲ್ 2020, 20:40 IST
ಅಕ್ಷರ ಗಾತ್ರ

ಬೆಂಗಳೂರು: ‘ಕೊವಿಡ್-19’ ಪಿಡುಗಿನ ಹಿನ್ನೆಲೆಯಲ್ಲಿ ನಾಗರಿಕರಿಗೆ ಅನುಕೂಲ ಮಾಡಿಕೊಡಲು ಇ–ಕಾಮರ್ಸ್‌ ಕಂಪನಿ ಫ್ಲಿಪ್‌ಕಾರ್ಟ್, ವಿಮೆ ಕಂಪನಿಗಳಾದ ಐಸಿಐಸಿಐ ಲೋಂಬಾರ್ಡ್ ಮತ್ತು ಡಿಜಿಟ್ ಇನ್ಶುರೆನ್ಸ್ ಸಹಭಾಗಿತ್ವದಲ್ಲಿ ಆರೋಗ್ಯ ವಿಮೆ ಪರಿಚಯಿಸಿದೆ.

ವೈದ್ಯಕೀಯ ಪರೀಕ್ಷೆಗಳ ಅಗತ್ಯವಿಲ್ಲದೇ ಈ ಆರೋಗ್ಯ ವಿಮೆಗಳನ್ನು ಖರೀದಿಸುವ ಅವಕಾಶ ಇಲ್ಲಿದೆ. ವಿಮೆ ಪಾಲಿಸಿದಾರರು ತಕ್ಷಣದಿಂದಲೇ ಇವುಗಳ ಪ್ರಯೋಜನ ಪಡೆಯಬಹುದಾಗಿದೆ. ಈ ಆರೋಗ್ಯ ವಿಮೆ ಸೌಲಭ್ಯಗಳು ಆಸ್ಪತ್ರೆಗೆ ದಾಖಲಾದ ಸಂದರ್ಭದಲ್ಲಿನ ಚಿಕಿತ್ಸಾ ವೆಚ್ಚ ಸೇರಿದಂತೆ ಸುಲಭವಾಗಿ ಪರಿಹಾರ (ಕ್ಲೇಮ್) ಪಡೆಯುವ ಸೌಲಭ್ಯ ಹೊಂದಿವೆ ಎಂದು ಫ್ಲಿಪ್‌ಕಾರ್ಟ್‌ ವಕ್ತಾರರು ತಿಳಿಸಿದ್ದಾರೆ.

ಐಸಿಐಸಿಐ ಲೋಂಬಾರ್ಡ್‌ನ ‘‘COVID-19 Protection Cover’ ಪಾಲಿಸಿ ಖರೀದಿಸುವ ಗ್ರಾಹಕರಿಗೆ ಕೊವಿಡ್-19 ಪಾಸಿಟಿವ್ ಇದೆ ಎಂದು ದೃಢವಾಗುತ್ತಿದ್ದಂತೆಯೇ ₹ 25 ಸಾವಿರ ಪರಿಹಾರ ನೀಡಲಿದೆ. ಈ ಪಾಲಿಸಿಯ ವಾರ್ಷಿಕ ಪ್ರೀಮಿಯಂ ₹ 159 ಇದೆ. ಫ್ಲಿಪ್‌ಕಾರ್ಟ್ ಗ್ರಾಹಕರು ವಿಮೆ ಕಂಪನಿಗೆ ಡಿಜಿಟಲ್ ಸ್ವರೂಪದಲ್ಲಿ ಅರ್ಜಿ ಸಲ್ಲಿಸಿ ಪರಿಹಾರ ಪಡೆಯಬಹುದು.

ಡಿಜಿಟ್ ಇನ್ಶುರೆನ್ಸ್ ಕಂಪನಿಯ ‘Digit Illness Group Insurance’ ಪಾಲಿಸಿಯು ಆಸ್ಪತ್ರೆಗೆ ದಾಖಲಾದಾಗ ಆಗುವ ಚಿಕಿತ್ಸಾ ವೆಚ್ಚ ಭರಿಸಲು ನೆರವಾಗುವ ದೃಷ್ಟಿಯಿಂದ ₹ 1 ಲಕ್ಷ ವಿಮೆ ಪರಿಹಾರ ನೀಡಲಿದೆ. ಇದರ ವಾರ್ಷಿಕ ಪ್ರೀಮಿಯಂ ದರ ₹ 511 ಇದೆ. ಈ ವಿಮೆಯು ಆಸ್ಪತ್ರೆಗೆ ದಾಖಲಾಗುವ 30 ದಿನಗಳ ಮುನ್ನ ಮತ್ತು ಆಸ್ಪತ್ರೆಯಿಂದ ಬಿಡುಗಡೆಯಾದ 60 ದಿನಗಳವರೆಗೆ ಆಸ್ಪತ್ರೆ ಶುಲ್ಕಕ್ಕೂ ಪರಿಹಾರ ನೀಡಲಿದೆ. ಈ ಎರಡೂ ಪಾಲಿಸಿಗಳು ಫ್ಲಿಪ್‌ಕಾರ್ಟ್ ತಾಣದಲ್ಲಿ ಲಭ್ಯ ಇವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT