ಬುಧವಾರ, ಏಪ್ರಿಲ್ 8, 2020
19 °C

ಹ್ಯಾಂಡ್‌ ಸ್ಯಾನಿಟೈಸರ್‌ ಬೆಲೆ ಇಳಿಕೆ

ಪಿಟಿಐ Updated:

ಅಕ್ಷರ ಗಾತ್ರ : | |

prajavani

ನವದೆಹಲಿ:  ಕೈಗಳನ್ನು ಶುದ್ಧಗೊಳಿಸಲು ಬಳಸುವ ದ್ರವ ಪದಾರ್ಥಗಳ (ಹ್ಯಾಂಡ್‌ ಸ್ಯಾನಿಟೈಸರ್‌) ಬೆಲೆಯನ್ನು ತ್ವರಿತವಾಗಿ ಬಿಕರಿಯಾಗುವ ಸರಕು ತಯಾರಿಸುವ (ಎಫ್‌ಎಂಸಿಜಿ) ವಿವಿಧ ಕಂಪನಿಗಳು ತಗ್ಗಿಸಿವೆ.

ಕೇಂದ್ರ ಸರ್ಕಾರದ ಸೂಚನೆಯಂತೆ ಕಂಪನಿಗಳು ಈ ನಿರ್ಧಾರ ಕೈಗೊಂಡಿವೆ. ‘ಕೊರೊನಾ–2’ ವೈರಸ್‌ ವ್ಯಾಪಕವಾಗಿ ಹರಡುತ್ತಿರುವುದರಿಂದ ಬೇಡಿಕೆಯು ದಿಢೀರನೆ ಹೆಚ್ಚಳಗೊಂಡಿರುವುದರಿಂದ ತಯಾರಿಕೆ ಪ್ರಮಾಣ ಹೆಚ್ಚಿಸಲೂ ಮುಂದಾಗಿವೆ.

ಹ್ಯಾಂಡ್‌ ಸ್ಯಾನಿಟೈಸರ್‌ ತಯಾರಿಸುವ ಐಟಿಸಿ, ಗೋದ್ರೆಜ್‌ ಕನ್ಸುಮರ್‌, ಹಿಮಾಲಯ, ಡಾಬರ್‌, ಎಚ್‌ಯುಎಲ್‌ ಮತ್ತು ಆರ್‌ಬಿ ಕಂಪನಿಗಳು ತಮ್ಮ ಉತ್ಪನ್ನಗಳ ಬೆಲೆ ಕಡಿತಕ್ಕೆ ಮುಂದಾಗಿವೆ. ಸದ್ಯಕ್ಕೆ ಉದ್ಭವಿಸಿರುವ ಆರೋಗ್ಯ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ದೇಶ ಬಾಂಧವರ ಜತೆ ನಿಲ್ಲುವುದಾಗಿಯೂ ಪ್ರಕಟಿಸಿವೆ.

ತಲಾ 200 ಎಂಎಲ್‌ ಬಾಟಲಿನ ಚಿಲ್ಲರೆ ಮಾರಾಟ ದರವನ್ನು ₹ 100ಕ್ಕೆ ನಿಗದಿಪಡಿಸಿ ಕೇಂದ್ರ ಸರ್ಕಾರ ಮಿತಿ ವಿಧಿಸಿದೆ.  ಜೂನ್‌ ತಿಂಗಳಾಂತ್ಯದವರೆಗೆ ಈ ಬೆಲೆ ಮಿತಿ ಜಾರಿಯಲ್ಲಿ ಇರಲಿದೆ.

ಗೋದ್ರೆಜ್‌:  ಗೊದ್ರೇಜ್‌ ಕಂಪನಿಯು ತನ್ನ ’ಪ್ರೊಟೆಕ್ಟ್‌ ಸ್ಯಾನಿಟೈಸರ್‌’ನ 50 ಎಂಎಲ್‌ ಬಾಟಲಿನ ಬೆಲೆಯನ್ನು ಸದ್ಯದ ₹ 75 ರಿಂದ ₹ 25ಕ್ಕೆ ಇಳಿಸಿದೆ. ತಕ್ಷಣದಿಂದ ಈ ಬೆಲೆ ಕಡಿತ ಜಾರಿಗೆ ಬಂದಿದೆ ಎಂದು ತಿಳಿಸಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು