ಗುರುವಾರ , ಫೆಬ್ರವರಿ 20, 2020
20 °C

ವಿದೇಶಿ ವಿನಿಮಯ ಸಂಗ್ರಹ ಹೆಚ್ಚಳ

ಪಿಟಿಐ Updated:

ಅಕ್ಷರ ಗಾತ್ರ : | |

ಮುಂಬೈ: ದೇಶದ ವಿದೇಶಿ ವಿನಿಮಯ ಮೀಸಲು ಸಂಗ್ರಹವು ಡಿಸೆಂಬರ್‌ 6ಕ್ಕೆ ಕೊನೆಗೊಂಡ ವಾರದಲ್ಲಿ ₹16,614 ಕೋಟಿಗಳಷ್ಟು ಹೆಚ್ಚಾಗಿ ₹32.64 ಲಕ್ಷ ಕೋಟಿಗಳಿಗೆ ಏರಿಕೆಯಾಗಿದೆ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಮಾಹಿತಿ ನೀಡಿದೆ.

ಅದಕ್ಕೂ ಹಿಂದಿನ ವಾರವೂ₹32.47 ಲಕ್ಷ ಕೋಟಿಗಳಿಗೆ ತಲುಪಿ, ಸಾರ್ವಕಾಲಿಕ ಗರಿಷ್ಠ ಮಟ್ಟದಲ್ಲಿಯೇ ಇತ್ತು.

2018ರ ಏಪ್ರಿಲ್‌ 13 ರಂದು ಮೊದಲ ಬಾರಿಗೆ ಸಾರ್ವಕಾಲಿಕ ಗರಿಷ್ಠ ಮಟ್ಟವಾದ ₹28.54 ಲಕ್ಷ ಕೋಟಿಗೆ ತಲುಪಿತ್ತು. ಆ ಬಳಿಕ ಏರಿಕೆ ಹಾದಿಯಲ್ಲಿಯೇ ಇದೆ.

ಮೀಸಲು ಸಂಗ್ರಹದಲ್ಲಿ ವಿದೇಶಿ ಕರೆನ್ಸಿಗಳ ಸಂಗ್ರಹವೇ ಅತಿ ಹೆಚ್ಚಿನ ಪ್ರಮಾಣದಲ್ಲಿದೆ. ವಾರದಲ್ಲಿ, ವಿದೇಶಿ ವಿನಿಮಯ ಸಂಗ್ರಹವು ₹13,608 ಕೋಟಿ ಹೆಚ್ಚಾಗಿ ₹30.33 ಲಕ್ಷ ಕೋಟಿಗಳಿಗೆ ಏರಿಕೆಯಾಗಿದೆ. ಇದರಿಂದಾಗಿ ಒಟ್ಟಾರೆ ಮೀಸಲು ಸಂಗ್ರಹ ದಾಖಲೆ ಮಟ್ಟಕ್ಕೆ ತಲುಪಿದೆ.

ವಾರದ ವಹಿವಾಟಿನಲ್ಲಿ ಚಿನ್ನದ ಮೀಸಲು ಸಂಗ್ರಹ ₹3,096 ಕೋಟಿ ಹೆಚ್ಚಾಗಿ ₹1.94 ಲಕ್ಷ ಕೋಟಿಗಳಿಗೆ ಏರಿಕೆಯಾಗಿದೆ.

ಅಂತರರಾಷ್ಟ್ರೀಯ ಹಣಕಾಸು ನಿಧಿಯಲ್ಲಿನ (ಐಎಂಎಫ್‌) ಭಾರತದ ಕರೆನ್ಸಿ ಸಂಗ್ರಹ ₹108 ಕೋಟಿ ಹೆಚ್ಚಾಗಿ ₹26,208 ಕೋಟಿಗೆ ತಲುಪಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು