ನವದೆಹಲಿ (ಪಿಟಿಐ): ಸತತ ಮೂರು ತಿಂಗಳುಗಳಿಂದ ದೇಶದ ಬಂಡವಾಳ ಮಾರುಕಟ್ಟೆಗಳಿಂದ ಹಣವನ್ನು ಹಿಂದಕ್ಕೆ ಪಡೆಯುತ್ತಿದ್ದ ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್ಪಿಐ) ಫೆಬ್ರುವರಿ ತಿಂಗಳ ಆರಂಭದಿಂದ 6ರವರೆಗೆ ₹8,129 ಕೋಟಿ ಹೂಡಿಕೆ ಮಾಡಿದ್ದಾರೆ.

ಅಮೆರಿಕ ಮತ್ತು ಭಾರತದ ವ್ಯಾಪಾರ ಒಪ್ಪಂದದಿಂದ ಹೂಡಿಕೆದಾರರಲ್ಲಿ ಆಶಾವಾದ ಮೂಡಿದೆ. ಇದು ದೇಶದ ಷೇರುಪೇಟೆಯಲ್ಲಿ ವಿದೇಶಿ ಹೂಡಿಕೆದಾರರ ಬಂಡವಾಳ ಹರಿವಿಗೆ ಒಂದು ಕಾರಣವಾಗಿದೆ.

‘ದೇಶದ ಬೆಳವಣಿಗೆಯ ಮುನ್ನೋಟದ ಬಗ್ಗೆ ಹೂಡಿಕೆದಾರರಲ್ಲಿ ವಿಶ್ವಾಸ ಹೆಚ್ಚಿದೆ. ರೆಪೊ ದರ ಸ್ಥಿರವಾಗಿದೆ. ಭಾರತ ಮತ್ತು ಅಮೆರಿಕದ ನಡುವಿನ ವ್ಯಾಪಾರ ಒಪ್ಪಂದದ ಬಗ್ಗೆ ಆಶಾವಾದ ಹೆಚ್ಚಿದೆ. ಇದು ವಿದೇಶಿ ಹೂಡಿಕೆದಾರರಿಗೆ ಷೇರುಗಳನ್ನು ಖರೀದಿಸಲು ಪೂರಕವಾಗಿವೆ’ ಎಂದು ಮಾರ್ನಿಂಗ್ಸ್ಟಾರ್ ಇನ್ವೆಸ್ಟ್ಮೆಂಟ್ ರಿಸರ್ಚ್ ಇಂಡಿಯಾದ ಪ್ರಧಾನ ವ್ಯವಸ್ಥಾಪಕ (ಸಂಶೋಧನಾ) ಹಿಮಾಂಶು ಶ್ರೀವಾಸ್ತವ ಹೇಳಿದ್ದಾರೆ.

ಕಳೆದ ವರ್ಷದ ನವೆಂಬರ್ನಲ್ಲಿ ವಿದೇಶಿ ಹೂಡಿಕೆದಾರರು ₹3,765 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದರು. ಡಿಸೆಂಬರ್ನಲ್ಲಿ ₹22,611 ಕೋಟಿ ಮತ್ತು ಈ ವರ್ಷದ ಜನವರಿಯಲ್ಲಿ ₹35,962 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದರು.

2025ರ ಪೂರ್ಣ ವರ್ಷದಲ್ಲಿ ದೇಶದ ಷೇರುಪೇಟೆಯಿಂದ ಹೂಡಿಕೆದಾರರು ₹1.66 ಲಕ್ಷ ಕೋಟಿ ಹಣವನ್ನು ಹಿಂಪಡೆದಿದ್ದರು. ಕರೆನ್ಸಿ ಮೌಲ್ಯದಲ್ಲಿ ಏರಿಳಿತ, ಜಾಗತಿಕ ಮಟ್ಟದಲ್ಲಿ ಉಂಟಾಗಿದ್ದ ವ್ಯಾಪಾರ ಬಿಕ್ಕಟ್ಟು, ಅಮೆರಿಕದ ಸುಂಕ ಮತ್ತು ಷೇರುಪೇಟೆಯಲ್ಲಿ ಹಲವು ಷೇರುಗಳ ಮೌಲ್ಯ ದುಬಾರಿ ಆಗಿದ್ದುದರಿಂದ ಹೂಡಿಕೆದಾರರು ಷೇರುಗಳ ಮಾರಾಟಕ್ಕೆ ಮುಂದಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.