ಭಾನುವಾರ, ಮಾರ್ಚ್ 26, 2023
23 °C
ಮಾರ್ಚ್‌ 10ಕ್ಕೆ ಕೊನೆಗೊಂಡ ವಾರದಲ್ಲಿ ₹19,598 ಕೋಟಿ ಇಳಿಕೆ

ಮೂರು ತಿಂಗಳ ಕನಿಷ್ಠ ಮಟ್ಟಕ್ಕೆ ಮೀಸಲು ಸಂಗ್ರಹ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ದೇಶದ ವಿದೇಶಿ ವಿನಿಮಯ ಮೀಸಲು ಸಂಗ್ರಹವು ಮಾರ್ಚ್‌ 10ಕ್ಕೆ ಕೊನೆಗೊಂಡ ವಾರದಲ್ಲಿ ₹19,598 ಕೋಟಿ ಇಳಿಕೆ ಕಂಡಿದ್ದು, ಮೂರು ತಿಂಗಳ ಕನಿಷ್ಠ ಮಟ್ಟವಾದ ₹45.92 ಲಕ್ಷ ಕೋಟಿಗೆ ಇಳಿಕೆ ಆಗಿದೆ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಶನಿವಾರ ತಿಳಿಸಿದೆ.

ಮಾರ್ಚ್‌ 3ಕ್ಕೆ ಕೊನೆಗೊಂಡ ವಾರದಲ್ಲಿ ₹11,972 ಕೋಟಿ ಹೆಚ್ಚಾಗಿ ₹46.08 ಲಕ್ಷ ಕೋಟಿಗೆ ಏರಿಕೆ ಕಂಡಿತ್ತು. ಈ ವರ್ಷದಲ್ಲಿ ಮಾರ್ಚ್ 10ರವರೆಗಿನ ಅವಧಿಯಲ್ಲಿ ಮೀಸಲು ಸಂಗ್ರಹವು ₹3.87 ಲಕ್ಷ ಕೋಟಿ ಕಡಿಮೆ ಆಗಿತ್ತು. ಪ್ರಸಕ್ತ ಹಣಕಾಸು ವರ್ಷದಲ್ಲಿ ಈವರೆಗೆ ಒಟ್ಟು  ₹5.10 ಲಕ್ಷ ಇಳಿಕೆ ಆಗಿದೆ ಎಂದು ಆರ್‌ಬಿಐ ಮಾಹಿತಿ ನೀಡಿದೆ.

ಮೀಸಲು ಸಂಗ್ರಹದಲ್ಲಿ ಹೆಚ್ಚಿನ ಪಾಲು ಹೊಂದಿರುವ ವಿದೇಶಿ ಕರೆನ್ಸಿಗಳ ಸಂಗ್ರಹದಲ್ಲಿ ಇಳಿಕೆ ಕಂಡಿರುವುದೇ ಇದಕ್ಕೆ ಕಾರಣ ಎಂದು ಹೇಳಿದೆ. ವಿದೇಶಿ ಕರೆನ್ಸಿಗಳ ಸಂಗ್ರಹವು ₹18,040 ಕೋಟಿಯಷ್ಟು ಕಡಿಮೆ ಆಗಿ ₹40.57 ಲಕ್ಷ ಕೋಟಿಗೆ ಇಳಿಕೆ ಕಂಡಿದೆ.

ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ರೂಪಾಯಿ ಮೌಲ್ಯ ಹೆಚ್ಚಿನ ಕುಸಿತ ಕಾಣುವುದನ್ನು ತಡೆಯಲು ಆರ್‌ಬಿಐ ಡಾಲರ್‌ ಅನ್ನು ಮಾರಾಟ ಮಾಡುತ್ತಿರುವುದೇ ಮೀಸಲು ಸಂಗ್ರಹ ಕಡಿಮೆ ಆಗುತ್ತಿರುವುದಕ್ಕೆ ಕಾರಣವಾಗಿದೆ.

ಚಿನ್ನದ ಮೀಸಲು ಸಂಗ್ರಹವು ₹3.43 ಲಕ್ಷ ಕೋಟಿಗೆ ತಲುಪಿದೆ. ಅಂತರರಾಷ್ಟ್ರೀಯ ಹಣಕಾಸು ನಿಧಿಯಲ್ಲಿ (ಐಎಂಎಫ್) ಭಾರತದ ಮೀಸಲು ಸಂಗ್ರಹ ₹902 ಕೋಟಿ ಇಳಿಕೆ ಕಂಡು ₹41,820 ಕೋಟಿಗೆ ತಲುಪಿತು.

ಫೆಬ್ರುವರಿ 10ಕ್ಕೆ ಕೊನೆಗೊಂಡ ವಾರದಲ್ಲಿ ಮೀಸಲು ಸಂಗ್ರಹವು ₹68,224 ಕೋಟಿಯಷ್ಟು ಹೆಚ್ಚಿನ ಕುಸಿತ ಕಂಡಿತ್ತು. 2021ರ ಅಕ್ಟೋಬರ್‌ನಲ್ಲಿ ಮೀಸಲು ಸಂಗ್ರಹವು ₹52.89 ಲಕ್ಷ ಕೋಟಿಗೆ ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು