ನವದೆಹಲಿ: ಐಫೋನ್ ತಯಾರಿಕಾ ಕಂಪನಿ ಫಾಕ್ಸ್ಕಾನ್ ತನ್ನ ಬೆಂಗಳೂರು ಘಟಕದಲ್ಲಿ ಕಾರ್ಯಾಚರಣೆ ಆರಂಭಿಸಿದ್ದು, ಸಣ್ಣ ಪ್ರಮಾಣದಲ್ಲಿ ‘ಐಫೋನ್ 17’ ತಯಾರಿಕೆ ಶುರು ಮಾಡಿದೆ ಎಂದು ಮೂಲಗಳು ತಿಳಿಸಿವೆ.

ಫಾಕ್ಸ್ಕಾನ್ ಅತಿದೊಡ್ಡ ಐಫೋನ್ ತಯಾರಕ ಕಂಪನಿಯಾಗಿದೆ. ಬೆಂಗಳೂರಿಗೆ ಸನಿಹದ ದೇವನಹಳ್ಳಿಯಲ್ಲಿ ಅಂದಾಜು ₹25 ಸಾವಿರ ಕೋಟಿ ಹೂಡಿಕೆಯೊಂದಿಗೆ ಕಂಪನಿಯು ಘಟಕ ಸ್ಥಾಪಿಸಿದೆ. ಕಂಪನಿಯ ಚೆನ್ನೈ ಘಟಕದಲ್ಲಿ ‘ಐಫೋನ್ 17’ ಈಗಾಗಲೇ ತಯಾರಾಗುತ್ತಿದೆ ಎಂದು ತಿಳಿಸಿವೆ.

ಕಂಪನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಚೀನಾ ಮೂಲಕ ನೂರಾರು ತಂತ್ರಜ್ಞರು ಇತ್ತೀಚೆಗೆ ಕೆಲಸ ತೊರೆದಿದ್ದರಿಂದ ತಯಾರಿಕೆಗೆ ಸ್ವಲ್ಪ ಅಡಚಣೆ ಉಂಟಾಗಿತ್ತು. ಆದರೂ ಕಂಪನಿಯು ವಿವಿಧ ಸ್ಥಳಗಳಿಂದ ತಜ್ಞರನ್ನು ಕರೆಸಿಕೊಂಡು ಕೊರತೆಯನ್ನು ತುಂಬಿತ್ತು.

6 ಕೋಟಿ ಗುರಿ: ಕಳೆದ ಆರ್ಥಿಕ ವರ್ಷದಲ್ಲಿ ಆ್ಯಪಲ್, 3.5 ಕೋಟಿಯಿಂದ 4 ಕೋಟಿಯಷ್ಟು ಐಫೋನ್ ತಯಾರಿಸಿತ್ತು. ಪ್ರಸಕ್ತ ಆರ್ಥಿಕ ವರ್ಷದಲ್ಲಿ ಈ ತಯಾರಿಕೆಯನ್ನು 6 ಕೋಟಿಗೆ ಹೆಚ್ಚಿಸಲು ಯೋಜಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.