ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಣಕಾಸು ಸೇವೆ: ವಿದೇಶಿ ಹೂಡಿಕೆದಾರರ ಆಕರ್ಷಣೆ

ನವೆಂಬರ್‌ನಲ್ಲಿ ₹14,205 ಕೋಟಿ ಹೂಡಿಕೆ
Last Updated 9 ಡಿಸೆಂಬರ್ 2022, 20:51 IST
ಅಕ್ಷರ ಗಾತ್ರ

ನವದೆಹಲಿ: ದೇಶದ ಹಣಕಾಸು ಸೇವೆಗಳ ವಲಯವು ವಿದೇಶಿ ಹೂಡಿಕೆದಾರರನ್ನು ಹೆಚ್ಚು ಆಕರ್ಷಿಸುತ್ತಿದೆ. ಈ ವಲಯದಲ್ಲಿ ನವೆಂಬರ್‌ ತಿಂಗಳಿನಲ್ಲಿ ವಿದೇಶಿ ಬಂಡವಾಳ ಹೂಡಿಕೆದಾರರಿಂದ (ಎಫ್‌ಪಿಐ) ₹ 14,205 ಕೋಟಿ ಬಂಡವಾಳ ಹೂಡಿಕೆ ಆಗಿದೆ.

ಸಾಲ ನೀಡಿಕೆ ಹೆಚ್ಚಾಗಿರುವುದು ಮತ್ತು ವಸೂಲಾಗದ ಸಾಲದ ಪ್ರಮಾಣವು ನಿರ್ವಹಿಸಬಹುದಾದ ಮಟ್ಟದಲ್ಲಿ ಇರುವುದೇ ಇಷ್ಟು ಬಂಡವಾಳ ಒಳಹರಿವಿಗೆ ಪ್ರಮುಖ ಕಾರಣಗಳಾಗಿವೆ. ಲಾಭ ಗಳಿಕೆಯ ಉದ್ದೇಶದಿಂದ ವಿದೇಶಿ ಹೂಡಿಕೆದಾರರು ಅಕ್ಟೋಬರ್‌ನಲ್ಲಿಹಣಕಾಸು ಸೇವಾ ಕಂಪನಿಗಳ ಷೇರುಗಳಿಂದ ₹ 4,686 ಕೋಟಿ ಬಂಡವಾಳ ಹಿಂದಕ್ಕೆ ಪಡೆದಿದ್ದರು.

ನ್ಯಾಷನಲ್‌ ಸೆಕ್ಯುರಿಟೀಸ್‌ ಡೆಪಾಸಿಟರಿ ಲಿಮಿಟೆಡ್‌ನಲ್ಲಿ (ಎನ್‌ಎಸ್‌ಡಿಎಲ್‌) ಇರುವ ಮಾಹಿತಿಯ ಪ್ರಕಾರ, ವಿದೇಶಿ ಬಂಡವಾಳ ಹೂಡಿಕೆದಾರರು ನವೆಂಬರ್‌ನಲ್ಲಿ ದೇಶದ ಷೇರುಪೇಟೆಗಳಲ್ಲಿ ಒಟ್ಟಾರೆ ₹ 36,238 ಕೋಟಿ ಬಂಡವಾಳ ತೊಡಗಿಸಿದ್ದಾರೆ. ಇದರಲ್ಲಿ ಹಣಕಾಸು ಸೇವೆಗಳ ವಲಯವು ₹ 14,205 ಕೋಟಿ ಹೂಡಿಕೆಯನ್ನು ಆಕರ್ಷಿಸಿದೆ. ಇದು ಷೇರುಗಳಲ್ಲಿ ಆಗಿರುವ ಒಟ್ಟು ಹೂಡಿಕೆಯ ಶೇ 39ರಷ್ಟು ಪಾಲು.

ಹಣಕಾಸು ಸೇವೆಗಳ ವಲಯದ ನಿರ್ವಹಣಾ ಸಂಪತ್ತು ಮೌಲ್ಯವು ನವೆಂಬರ್‌ ತಿಂಗಳ ಅಂತ್ಯಕ್ಕೆ ₹ 16.13 ಲಕ್ಷ ಕೋಟಿ ಆಗಿದೆ.

ಗ್ರಾಹಕ ಬಳಕೆ ವಸ್ತುಗಳು ವಲಯದಿಂದ ₹ 1,275 ಕೋಟಿ ಬಂಡವಾಳ ಹೊರಹರಿವು ಆಗಿದೆ. ಅದೇ ರೀತಿ ವಿದ್ಯುತ್ ವಲಯದಿಂದ ₹ 1,100 ಕೋಟಿ ಮತ್ತು ದೂರಸಂಪರ್ಕ ವಲಯದಿಂದ ₹ 1,084 ಕೋಟಿ ಬಂಡವಾಳ ಹೊರಹರಿವು ಆಗಿದೆ.

ಸಾಲ ನೀಡಿಕೆಯು ಶೇ 17ರಷ್ಟು ಬೆಳವಣಿಗೆ ಕಂಡಿದೆ. ದಶಕದ ಕನಿಷ್ಠ ಮಟ್ಟದಲ್ಲಿ ಇದ್ದ ಕಾರ್ಪೊರೇಟ್‌ ಬಂಡವಾಳ ವೆಚ್ಚವು ಚೇತರಿಕೆ ಕಂಡುಕೊಳ್ಳುವ ಸೂಚನೆ ನೀಡಿದೆ ಎಂದು ಬಜಾಜ್ ಕ್ಯಾಪಿಟಲ್‌ನ ಅಧ್ಯಕ್ಷ ರಾಜೀವ್ ಬಜಾಜ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT