ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಫ್‌ಪಿಐ: ₹ 1.3 ಲಕ್ಷ ಕೋಟಿ ಹೂಡಿಕೆ

ಷೇರುಗಳ ಮೇಲಿನ ಬಂಡವಾಳ ಹೂಡಿಕೆ 6 ವರ್ಷಗಳಲ್ಲಿಯೇ ಗರಿಷ್ಠ
Last Updated 22 ಡಿಸೆಂಬರ್ 2019, 20:07 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ವಿದೇಶಿ ಬಂಡವಾಳ ಹೂಡಿಕೆದಾರರು (ಎಫ್‌ಪಿಐ) ದೇಶಿ ಆರ್ಥಿಕತೆಯಲ್ಲಿನ ನಕಾರಾತ್ಮಕ ಅಂಶಗಳನ್ನು ಪರಿಗಣಿಸದೇ 2019ರಲ್ಲಿ ಹೂಡಿಕೆಗೆ ಹೆಚ್ಚು ಆದ್ಯತೆ ನೀಡಿದ್ದಾರೆ.

2019ರಲ್ಲಿ ಡಿಸೆಂಬರ್‌ 20ರವರೆಗೆ ಬಂಡವಾಳ ಮಾರುಕಟ್ಟೆಯಲ್ಲಿ ₹ 1.3 ಲಕ್ಷ ಕೋಟಿ ಹೂಡಿಕೆ ಮಾಡಿದ್ದಾರೆ. ಇದರಲ್ಲಿ ಷೇರುಗಳ ಮೇಲಿನ ಹೂಡಿಕೆಯೇ ₹ 97,250 ಕೋಟಿ ಇದೆ. ಇದು ಆರು ವರ್ಷಗಳಲ್ಲಿಯೇ ಅತ್ಯಂತ ಗರಿಷ್ಠ ಮಟ್ಟದ್ದಾಗಿದೆ.ಐದು ವರ್ಷಗಳಲ್ಲಿ ಹೂಡಿಕೆ ಮಾಡಿರುವ ಎರಡನೇ ಗರಿಷ್ಠ ಮೊತ್ತ ಇದಾಗಿದೆ. 2017ರಲ್ಲಿ ₹ 2 ಲಕ್ಷ ಕೋಟಿಯನ್ನೂ ದಾಟಿತ್ತು.

‘ಕೇಂದ್ರೀಯ ಬ್ಯಾಂಕ್‌ಗಳಿಂದ ಬಂಡವಾಳ ಹೂಡಿಕೆ, ಕಾರ್ಪೊರೇಟ್‌ ವಲಯದ ಗಳಿಕೆಯಲ್ಲಿ ಚೇತರಿಕೆಯಂತಹ ಸಕಾರಾತ್ಮಕ ವಿದ್ಯಮಾನಗಳು ಹೂಡಿಕೆ ಹೆಚ್ಚಿಸಲು ನೆರವಾಗಿವೆ’ ಎಂದು ಬಜಾಜ್‌ ಕ್ಯಾಪಿಟಲ್‌ನ ಸಂಶೋಧನಾ ಮುಖ್ಯಸ್ತ ಅಲೋಕ್‌ ಅಗರ್‌ವಾಲ್‌ ಹೇಳಿದ್ದಾರೆ. ಅತಿ ಹೆಚ್ಚು ಹೂಡಿಕೆ: ಬ್ಯಾಂಕ್‌, ತೈಲ ಮತ್ತು ಅನಿಲ ಹಾಗೂ ವಿಮಾ ವಲಯಗಳು ಅತಿ ಹೆಚ್ಚಿನ ಎಫ್‌ಪಿಐ ಆಕರ್ಷಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT