ಭಾನುವಾರ, 3 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಫ್‌ಪಿಐ: ₹19,800 ಕೋಟಿ ಹೂಡಿಕೆ

Published 4 ಫೆಬ್ರುವರಿ 2024, 14:01 IST
Last Updated 4 ಫೆಬ್ರುವರಿ 2024, 14:01 IST
ಅಕ್ಷರ ಗಾತ್ರ

ನವದೆಹಲಿ: ವಿದೇಶಿ ಬಂಡವಾಳ ಹೂಡಿಕೆದಾರರು (ಎಫ್‌ಪಿಐ) ದೇಶದ ಸಾಲ ಮಾರುಕಟ್ಟೆಯಲ್ಲಿ ಜನವರಿಯಲ್ಲಿ ₹19,800 ಕೋಟಿಗೂ ಅಧಿಕ ಮೊತ್ತವನ್ನು ಹೂಡಿಕೆ ಮಾಡಿದ್ದಾರೆ. ಇದು ಆರು ವರ್ಷದ ಗರಿಷ್ಠ ಮಾಸಿಕ ಒಳಹರಿವು ಆಗಿದೆ.

ಅಮೆರಿಕದಲ್ಲಿ ಬಾಂಡ್‌ಗಳಿಂದ ಸಿಗುವ ಆದಾಯದ ಏರಿಕೆಯಿಂದಾಗಿ ಕಳೆದ ತಿಂಗಳು ₹25,743 ಕೋಟಿ ಮೌಲ್ಯದ ಷೇರುಗಳನ್ನು ವಾಪಸ್‌ ತೆಗೆದುಕೊಂಡಿದ್ದಾರೆ ಎಂದು ಅಂಕಿ ಅಂಶಗಳು ತಿಳಿಸಿವೆ.

2024ರ ಜನವರಿಯಲ್ಲಿ ₹19,836 ಕೋಟಿ, 2023ರ ಡಿಸೆಂಬರ್‌ನಲ್ಲಿ ₹18,302 ಕೋಟಿ, ನವೆಂಬರ್‌ ₹14,860 ಕೋಟಿ ಮತ್ತು ಅಕ್ಟೋಬರ್‌ನಲ್ಲಿ ₹6,381 ಕೋಟಿ ಎಫ್‌ಪಿಐ ಹೂಡಿಕೆ ಆಗಿತ್ತು.

‘ಜೆಪಿ ಮೋರ್ಗನ್ ತನ್ನ ಸೂಚ್ಯಂಕದಲ್ಲಿ ಭಾರತ ಸರ್ಕಾರದ ಬಾಂಡ್‌ಗಳನ್ನು ಸೇರಿಸುವ ನಿರ್ಧಾರ ಕೈಗೊಂಡಿದೆ. ಹೀಗಾಗಿ, ಜನವರಿಯಲ್ಲಿ ಎಫ್‌ಪಿಐಗಳಿಂದ ₹19,836 ಕೋಟಿ ನಿವ್ವಳ ಒಳಹರಿವು ಬಂದಿದೆ’ ಎಂದು ಮಾರ್ನಿಂಗ್‌ಸ್ಟಾರ್ ಇನ್ವೆಸ್ಟ್‌ಮೆಂಟ್ ರಿಸರ್ಚ್ ಇಂಡಿಯಾದ ಹಿಮಾಂಶು ಶ್ರೀವಾಸ್ತವ ಹೇಳಿದ್ದಾರೆ.

ಮುಂದಿನ 18ರಿಂದ 24 ತಿಂಗಳಲ್ಲಿ ಸುಮಾರು ₹1.65 ಲಕ್ಷ ಕೋಟಿಯಿಂದ ₹3.30 ಲಕ್ಷ ಕೋಟಿಯಷ್ಟು ಒಳಹರಿವು ನಿರೀಕ್ಷಿಸಲಾಗಿದೆ. ಇದರಿಂದಾಗಿ ವಿದೇಶಿ ಹೂಡಿಕೆದಾರರಿಗೆ ಭಾರತದ ಬಾಂಡ್‌ಗಳ ಲಭ್ಯತೆ ಹೆಚ್ಚಾಗುತ್ತದೆ. ಇದರಿಂದಾಗಿ, ರೂಪಾಯಿಯನ್ನು ಬಲಗೊಳ್ಳಬಹುದು ಮತ್ತು ಆರ್ಥಿಕತೆಗೆ ಉತ್ತೇಜನ ದೊರೆಯಬಹುದು ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT