ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫ್ರ್ಯಾಂಕ್ಲಿನ್‌ ಟೆಂಪಲ್‌ಟನ್‌: ಸೋಮವಾರದಿಂದ ಹೂಡಿಕೆದಾರರಿಗೆ ಏಳನೇ ಕಂತು ಪಾವತಿ

Last Updated 20 ನವೆಂಬರ್ 2021, 11:21 IST
ಅಕ್ಷರ ಗಾತ್ರ

ನವದೆಹಲಿ: ಫ್ರ್ಯಾಂಕ್ಲಿನ್‌ ಟೆಂಪಲ್‌ಟನ್‌ ಮ್ಯೂಚುವಲ್‌ ಫಂಡ್‌ ಕಂಪನಿ ಸ್ಥಗಿತಗೊಳಿಸಿರುವ ಆರು ಮ್ಯೂಚುವಲ್‌ ಫಂಡ್‌ಗಳಲ್ಲಿ ಹಣ ಹೂಡಿಕೆ ಮಾಡಿದ್ದವರಿಗೆ ಏಳನೇ ಕಂತಿನಲ್ಲಿ ₹ 1,115 ಕೋಟಿಯನ್ನು ಎಸ್‌ಬಿಐ ಫಂಡ್‌ ಮ್ಯಾನೇಜ್‌ಮೆಂಟ್‌ ಕಂಪನಿಯು ಸೋಮವಾರದಿಂದ ಹಿಂದಿರುಗಿಸಲಿದೆ.

ಈ ಮೊತ್ತವನ್ನು ಸೇರಿಸಿದರೆ ಹೂಡಿಕೆದಾರರಿಗೆ ಹಿಂದಿರುಗಿಸಿದ ಒಟ್ಟು ಮೊತ್ತವು ₹ 25,114 ಕೋಟಿ ಆಗಲಿದೆ. ಇದು 2020ರ ಏಪ್ರಿಲ್‌ 23ರಂದು ಕಂಪನಿಯು ನಿರ್ವಹಣೆ ಮಾಡುತ್ತಿದ್ದ ಒಟ್ಟು ಮೊತ್ತದ ಶೇಕಡ 99.6ರಷ್ಟು ಎಂದು ಫ್ರ್ಯಾಂಕ್ಲಿನ್‌ ಟೆಂ‍ಪಲ್‌ಟನ್‌ ಕಂಪನಿಯ ವಕ್ತಾರರು ತಿಳಿಸಿದ್ದಾರೆ.

ಕೆವೈಸಿ ಪ್ರಕ್ರಿಯೆ ಪೂರ್ಣಗೊಂಡಿರುವ ಎಲ್ಲಾ ಹೂಡಿಕೆದಾರರಿಗೂಎಸ್‌ಬಿಐ ಮ್ಯೂಚುವಲ್‌ ಫಂಡ್‌ ನವೆಂಬರ್‌ 22ರಿಂದ ಹಣವನ್ನು ಪಾವತಿ ಮಾಡಲಿದೆ. ಎಲ್ಲಾ ಅರ್ಹ ಹೂಡಿಕೆದಾರರ ಖಾತೆಗೂ ವಿದ್ಯುನ್ಮಾನ ರೂಪದಲ್ಲಿ ಹಣ ಪಾವತಿ ಆಗಲಿದೆ. ಒಂದೊಮ್ಮೆ ವಿದ್ಯುನ್ಮಾನ ಪಾವತಿ ಸಾಧ್ಯವಾಗದೇ ಇದ್ದರೆ ಚೆಕ್‌ ಅಥವಾ ಡಿಮಾಂಡ್‌ ಡ್ರ್ಯಾಫ್ಟ್‌ ನೀಡಲಿದೆ. ಹಣವನ್ನು ಹೂಡಿಕೆದಾರರಿಗೆ ಮರಳಿಸುವ ಜವಾಬ್ದಾರಿಯನ್ನು ಎಸ್‌ಬಿಐ ಫಂಡ್‌ ಮ್ಯಾನೇಜ್‌ಮೆಂಟ್‌ ಕಂಪನಿಗೆ ಸುಪ್ರೀಂ ಕೋರ್ಟ್‌ ವಹಿಸಿದೆ.

ಪಾವತಿ ಅಗಿರುವ ಮೊತ್ತ (ಕೋಟಿಗಳಲ್ಲಿ)
ಫೆಬ್ರುವರಿ; ₹ 9,122
ಏಪ್ರಿಲ್‌; ₹ 2,962
ಮೇ;₹ 2,489
ಜೂನ್‌;₹ 3,205
ಜುಲೈ; ₹ 3,303
ಸೆಪ್ಟೆಂಬರ್‌;₹ 2,918

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT