ಮಂಗಳವಾರ, ಮಾರ್ಚ್ 2, 2021
19 °C

ಗೇಲ್‌ ಷೇರು ಮರುಖರೀದಿ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಗೇಲ್‌ ಇಂಡಿಯಾ ಕಂಪನಿಯು ₹ 1,046 ಕೋಟಿ ಮೌಲ್ಯದ ಷೇರುಗಳನ್ನು ಮರಳಿ ಖರೀದಿಸುತ್ತಿರುವುದಾಗಿ ಶುಕ್ರವಾರ ಹೇಳಿದೆ. ಪ್ರತಿ ಷೇರಿಗೆ ₹ 150ರಂತೆ ಒಟ್ಟು 6.97 ಕೋಟಿ ಷೇರುಗಳ ಮರುಖರೀದಿಗೆ ತನ್ನ ಆಡಳಿತ ಮಂಡಳಿ ಅನುಮೋದನೆ ನೀಡಿದೆ ಎಂದು ಕಂಪನಿಯು ಷೇರುಪೇಟೆಗೆ ಮಾಹಿತಿ ನೀಡಿದೆ.

2020–21ನೇ ಸಾಲಿಗೆ ಪ್ರತಿ ಷೇರಿಗೆ ₹ 2.50 ಡಿವಿಡೆಂಡ್ ನೀಡಲು ಕೂಡ ಕಂಪನಿಯ ಆಡಳಿತ ಮಂಡಳಿಯು ಒಪ್ಪಿಗೆ ನೀಡಿದೆ. ಗೇಲ್ ಕಂಪನಿಯಲ್ಲಿ ಕೇಂದ್ರ ಸರ್ಕಾರವು ಶೇ 51.76ರಷ್ಟು ಷೇರುಗಳನ್ನು ಹೊಂದಿದೆ. ಷೇರು ಮರುಖರೀದಿ ಪ್ರಕ್ರಿಯೆಯಲ್ಲಿ ಕೇಂದ್ರವೂ ಭಾಗಿಯಾಗಲಿದೆ ಎಂದು ನಿರೀಕ್ಷಿಸಲಾಗಿದೆ.

ಡಿವಿಡೆಂಡ್ ಪಾವತಿಯಿಂದಾಗಿ ಕೇಂದ್ರ ಸರ್ಕಾರಕ್ಕೆ ₹ 583.6 ಕೋಟಿ ಸಿಗಲಿದೆ. ಷೇರು ಮರುಖರೀದಿ ಪ್ರಕ್ರಿಯೆಯಲ್ಲಿ ಪಾಲ್ಗೊಂಡರೆ ಹೆಚ್ಚುವರಿಯಾಗಿ ₹ 541.5 ಕೋಟಿ ಸಿಗಲಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು