ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮುಕೇಶ್ ಅಂಬಾನಿಯನ್ನು ಹಿಂದಿಕ್ಕಿ ಏಷ್ಯಾದ ಶ್ರೀಮಂತ ವ್ಯಕ್ತಿಯಾದ ಗೌತಮ್ ಅದಾನಿ

Published 2 ಜೂನ್ 2024, 6:19 IST
Last Updated 2 ಜೂನ್ 2024, 6:19 IST
ಅಕ್ಷರ ಗಾತ್ರ

ನವದೆಹಲಿ: ಉದ್ಯಮಿ ಮುಕೇಶ್ ಅಂಬಾನಿಯನ್ನು ಹಿಂದಿಕ್ಕುವ ಮೂಲಕ ಗೌತಮ್ ಅದಾನಿ ಮತ್ತೆ ಏಷ್ಯಾದ ಶ್ರೀಮಂತ ವ್ಯಕ್ತಿ ಪಟ್ಟಕ್ಕೇರಿದ್ದಾರೆ.

ಸೇಬು ಉದ್ಯಮದಿಂದ ಹಿಡಿದು ವಿಮಾನ ನಿಲ್ದಾಣದವರೆಗೆ ಅವರ ಕಂಪನಿಗಳ ಷೇರು ಮೌಲ್ಯದಲ್ಲಿ ಏರಿಕೆ ಕಂಡಿರುವುದು ಅವರನ್ನು ಈ ಪಟ್ಟಕ್ಕೇರಿಸಿದೆ.

111 ಬಿಲಿಯನ್ ಡಾಲರ್ ನಿವ್ವಳ ಮೌಲ್ಯದ ಸಂಪತ್ತಿನ ಮೂಲಕ ಅವರು ವಿಶ್ವದ 11ನೇ ಶ್ರೀಮಂತರಾಗಿದ್ದಾರೆ. ಮುಕೇಶ್ ಅಂಬಾನಿ 109 ಡಾಲರ್ ನಿವ್ವಳ ಸಂಪತ್ತಿನ ಮೌಲ್ಯ ಹೊಂದಿದ್ದು, 12ನೇ ಸ್ಥಾನದಲ್ಲಿದ್ದಾರೆ ಎಂದು ಬ್ಲೂಮ್‌ಬರ್ಗ್ ಬಿಲಿಯನೇರ್ ಇಂಡೆಕ್ಸ್ ತಿಳಿಸಿದೆ.

ಅದಾನಿ ಗ್ರೂಪ್‌ನ ಎಲ್ಲ ಕಂಪನಿಗಳ ಷೇರುಗಳು ಶುಕ್ರವಾರ ಶೇಕಡ 14ರಷ್ಟು ಏರಿಕೆ ಕಂಡಿದ್ದವು.

ಶುಕ್ರವಾರ ಷೇರುಪೇಟೆ ವಹಿವಾಟು ಅಂತ್ಯದ ವೇಳೆಗೆ ಅದಾನಿ ಕಂಪನಿಗಳ ಷೇರುಗಳ ಮೌಲ್ಯ ₹84,064 ಹೆಚ್ಚಿ, ಒಟ್ಟು ಮೌಲ್ಯ ₹17.51 ಲಕ್ಷ ಕೋಟಿಗೆ ಹೆಚ್ಚಾಗುವ ಮೂಲಕ ಅದಾನಿ ಏಷ್ಯಾದ ಶ್ರೀಮಂತ ವ್ಯಕ್ತಿ ಎಂಬ ಖ್ಯಾತಿ ಸಿಕ್ಕಿದೆ.

ಮುಕೇಶ್ ಅಂಬಾನಿ ಕುಟುಂಬ ಸದ್ಯ ಯೂರೋಪ್‌ನ ಐಷಾರಾಮಿ ಕ್ರೂಸ್‌ನಲ್ಲಿ ನಡೆಯುತ್ತಿರುವ ಮಗ ಅನಂತ್ ಅಂಬಾನಿಯ 2ನೇ ವಿವಾಹ ಪೂರ್ವ ಕಾರ್ಯಕ್ರಮದಲ್ಲಿ ತೊಡಗಿಕೊಂಡಿದೆ.

2022ರಲ್ಲಿ ಜಾಗತಿಕ ಆರ್ಥಿಕತೆ ಕುಸಿತ ಕಂಡರೂ ತಮ್ಮ ವೈಯಕ್ತಿಕ ಸಂಪತ್ತಿನಲ್ಲಿ ಏರಿಕೆ ದಾಖಲಿಸುವ ಮೂಲಕ ಅದಾನಿ ಏಷ್ಯಾದ ಶ್ರೀಮಂತ ವ್ಯಕ್ತಿ ಎಂಬ ಪಟ್ಟ ಗಿಟ್ಟಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT