ಗುರುವಾರ , ಮಾರ್ಚ್ 23, 2023
23 °C

ಕಾಲೇಜು ಶಿಕ್ಷಣ ಪೂರ್ಣಗೊಳಿಸದೆ ಇದ್ದುದಕ್ಕೆ ನನಗೆ ವಿಷಾದವಿದೆ: ಗೌತಮ್ ಅದಾನಿ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಕಾಲೇಜು ಶಿಕ್ಷಣವನ್ನು ಪೂರ್ಣಗೊಳಿಸದೆ ಇದ್ದುದಕ್ಕೆ ತಮಗೆ ವಿಷಾದವಿದೆ ಎಂದು ಉದ್ಯಮಿ ಗೌತಮ್ ಅದಾನಿ ಹೇಳಿದ್ದಾರೆ. ಎಳೆ ವಯಸ್ಸಿನಲ್ಲಿ ಸಿಕ್ಕ ಅನುಭವಗಳು ತಮ್ಮನ್ನು ಹೆಚ್ಚು ವಿವೇಕಿಯನ್ನಾಗಿಸಿದರೂ, ತರಗತಿಯಲ್ಲಿ ಸಿಗುವ ಶಿಕ್ಷಣವು ಜ್ಞಾನವನ್ನು ತೀವ್ರವಾಗಿ ಹೆಚ್ಚಿಸಬಲ್ಲದು ಎಂದು ಅವರು ಹೇಳಿದ್ದಾರೆ.

ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅದಾನಿ, ‘ಶಿಕ್ಷಣವನ್ನು ಮೊಟಕುಗೊಳಿಸಲು ತೀರ್ಮಾನಿಸಿದಾಗ ನನಗೆ 16 ವರ್ಷ ವಯಸ್ಸಾಗಿತ್ತು. ನಾನು ಕಾಲೇಜು ಶಿಕ್ಷಣವನ್ನು ಪೂರ್ಣಗೊಳಿಸಿದ್ದಿದ್ದರೆ ನನಗೆ ಇನ್ನಷ್ಟು ಪ್ರಯೋಜನವಾಗುತ್ತಿತ್ತು. ಅನುಭವದಿಂದ ಬುದ್ಧಿವಂತಿಕೆ ಸಿಗುತ್ತದೆ, ಅಧ್ಯಯನದಿಂದ ಜ್ಞಾನ ಸಿಗುತ್ತದೆ’ ಎಂದಿದ್ದಾರೆ.

‘ಬುದ್ಧಿವಂತಿಕೆ ಹಾಗೂ ಜ್ಞಾನ ಪರಸ್ಪರ ಪೂರಕ. ನಾನು ಕಾಲೇಜಿಗೆ ಹೋಗಿದ್ದಿದ್ದರೆ ನನ್ನ ಸಾಮರ್ಥ್ಯವು ಇನ್ನಷ್ಟು ವೇಗವಾಗಿ ಬೆಳೆಯುತ್ತಿತ್ತು ಎಂದು ನಾನು ಆಲೋಚಿಸುವುದಿದೆ’ ಎಂದು ಅವರು ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು