ಶನಿವಾರ, ಅಕ್ಟೋಬರ್ 23, 2021
20 °C

ಬೆಂಗಳೂರು: ಗಿರಿಯಾಸ್ 100ನೇ ಮಳಿಗೆ ಉದ್ಘಾಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಎಲೆಕ್ಟ್ರಾನಿಕ್ಸ್‌ ಮತ್ತು ಇತರ ಗೃಹಬಳಕೆಯ ಉಪಕರಣಗಳ ಮಾರಾಟ ಕಂಪನಿಯಾಗಿರುವ ಗಿರಿಯಾಸ್‌, ತನ್ನ ನೂರನೆಯ ಮೆಗಾ ಮಳಿಗೆಯನ್ನು ನಗರದ ಥಣಿಸಂದ್ರ ಮುಖ್ಯರಸ್ತೆಯಲ್ಲಿರುವ ‘ಭಾರ್ತಿಯಾ ಸಿಟಿ’ಯಲ್ಲಿ ಆರಂಭಿಸಿದೆ.

ಹೊಸ ಮಳಿಗೆಯು ಶುಕ್ರವಾರದಿಂದ ಗ್ರಾಹಕರ ಸೇವೆಗೆ ಲಭ್ಯವಾಗಿದೆ ಎಂದು ಕಂಪನಿಯ ಪ್ರಕಟಣೆ ತಿಳಿಸಿದೆ. ಕಂಪನಿಯು ಈಗ ಮೂರು ರಾಜ್ಯಗಳ 49 ನಗರಗಳಲ್ಲಿ ಮಳಿಗೆಗಳನ್ನು ಹೊಂದಿದೆ.

ಕಂಪನಿಯು 50 ವರ್ಷಗಳನ್ನು ಪೂರೈಸಿ, 100 ಮಳಿಗೆಗಳನ್ನು ತೆರೆದಿರುವ ಕಾರಣಕ್ಕೆ ಗ್ರಾಹಕರಿಗೆ ಹಲವು ಕೊಡುಗೆಗಳನ್ನು ಘೋಷಿಸಲಾಗಿದೆ. ಗರಿಷ್ಠ ₹ 5 ಸಾವಿರದವರೆಗಿನ ಗಿಫ್ಟ್‌ ವೋಚರ್‌ಗಳು, ಪ್ರಮುಖ ಬ್ರ್ಯಾಂಡ್‌ಗಳ ಉಪಕರಣ ಖರೀದಿಯ ಮೇಲೆ ಉಡುಗೊರೆಗಳು, ಗರಿಷ್ಠ ಶೇ 20ರವರೆಗೆ ಕ್ಯಾಶ್‌ಬ್ಯಾಕ್‌, ಉಚಿತವಾಗಿ ಹಣಕಾಸು ಸೇವೆಗಳನ್ನು ಒದಗಿಸುವುದು ಇವುಗಳಲ್ಲಿ ಸೇರಿದೆ. ಸಂಪರ್ಕ ಸಂಖ್ಯೆ: 70900 00981

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು