ನವದೆಹಲಿ: ಜಾಗತಿಕ ಮಾರುಕಟ್ಟೆಯಲ್ಲೂ ಹಳದಿ ಲೋಹದ ಬೆಲೆ ಏರುಗತಿಯಲ್ಲಿದೆ. ಮಂಗಳವಾರದ ಆರಂಭಿಕ ವಹಿವಾಟಿನಲ್ಲಿ ಪ್ರತಿ ಔನ್ಸ್ಗೆ (28.34 ಗ್ರಾಂ) 3,499.92 ಡಾಲರ್ಗೆ (₹3.71 ಲಕ್ಷ) ಮುಟ್ಟಿತ್ತು. ವಹಿವಾಟಿನ ಅಂತ್ಯಕ್ಕೆ 3,466.93 ಡಾಲರ್ನಲ್ಲಿ ಸ್ಥಿರಗೊಂಡಿತು.

‘ಮೊದಲ ಬಾರಿಗೆ ಪ್ರತಿ ಔನ್ಸ್ ಚಿನ್ನದ ದರ 3,500 ಡಾಲರ್ ಮುಟ್ಟಿದೆ. ಅಮೆರಿಕದ ಜೊತೆಗೆ ವ್ಯಾಪಾರ ಒಪ್ಪಂದಕ್ಕೆ ಮುಂದಾಗಿರುವ ರಾಷ್ಟ್ರಗಳಿಗೆ ಚೀನಾವು ಎಚ್ಚರಿಕೆಯ ಸಂದೇಶ ರವಾನಿಸುತ್ತಿದೆ. ಮತ್ತೊಂದೆಡೆ ಜಾಗತಿಕ ಆರ್ಥಿಕತೆ ಬೆಳವಣಿಗೆಯು ಮಂದಗತಿಯಲ್ಲಿದೆ’ ಎಂದು ಕೋಟಕ್ ಸೆಕ್ಯುರಿಟೀಸ್ನ ಸರಕು ಸಂಶೋಧನಾ ವಿಭಾಗದ ಉಪಾಧ್ಯಕ್ಷ ಕೈನಾತ್ ಚೈನ್ವಾಲಾ ಹೇಳಿದ್ದಾರೆ.

‘ಅಲ್ಲದೆ, ವಿವಿಧ ದೇಶಗಳ ಕೇಂದ್ರೀಯ ಬ್ಯಾಂಕ್ಗಳು ಕೈಗೊಳ್ಳುವ ಹಣಕಾಸು ನೀತಿಯ ಮೇಲೆ ಹೂಡಿಕೆದಾರರು ನಿಗಾ ಇಟ್ಟಿದ್ದಾರೆ. ಇದು ಕೂಡ ಚಿನ್ನದ ಏರಿಕೆಗೆ ಕಾರಣವಾಗಿದೆ’ ಎಂದು ಹೇಳಿದ್ದಾರೆ.

ಸುಂಕ ನೀತಿಯ ಬಿಕ್ಕಟ್ಟು: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿರುವ ಪ್ರತಿ ಸುಂಕ ನೀತಿಯು ಜಾಗತಿಕ ವ್ಯಾಪಾರ ಮಾರುಕಟ್ಟೆಯಲ್ಲಿ ಅನಿಶ್ಚಿತ ಸ್ಥಿತಿ ಸೃಷ್ಟಿಸಿದೆ. ಚೀನಾ ಕೂಡ ಅಮೆರಿಕದ ಸರಕುಗಳ ಮೇಲೆ ಸುಂಕದ ಪ್ರಮಾಣವನ್ನು ಹೆಚ್ಚಿಸಿದೆ. ಇದು ಉಭಯ ರಾಷ್ಟ್ರಗಳ ನಡುವೆ ವ್ಯಾಪಾರದ ಬಿಕ್ಕಟ್ಟಿಗೆ ನಾಂದಿ ಹಾಡಿದೆ. ಇದರಿಂದ ಬಂಗಾರದ ಬೆಲೆ ಏರಿಕೆಯಾಗುತ್ತಿದೆ ಎಂದು ತಜ್ಞರು ಹೇಳಿದ್ದಾರೆ.

ಫೆಡರಲ್ ರಿಸರ್ವ್ ನಿಲುವು: ಸುಂಕ ನೀತಿಯು ಅಮೆರಿಕದ ಆರ್ಥಿಕತೆ ಬೆಳವಣಿಗೆಗೆ ಅಡ್ಡಿಯಾಗಲಿದೆ. ಜೊತೆಗೆ, ಚಿಲ್ಲರೆ ಹಣದುಬ್ಬರ ಏರಿಕೆಗೆ ಕಾರಣವಾಗಲಿದೆ ಎಂದು ಅಲ್ಲಿನ ಕೇಂದ್ರೀಯ ಬ್ಯಾಂಕ್ ಆದ ಫೆಡರಲ್ ರಿಸರ್ವ್ ಗವರ್ನರ್ ಜೆರೋಮ್ ಪೊವೆಲ್ ಹೇಳಿದ್ದಾರೆ.

ಈ ಹೇಳಿಕೆಯು ಮುಂದಿನ ತಿಂಗಳ ಮೊದಲ ವಾರ ನಡೆಯುವ ಬ್ಯಾಂಕ್ನ ಹಣಕಾಸು ನೀತಿ ಸಮಿತಿ ಸಭೆಯಲ್ಲಿ ಬಡ್ಡಿದರ ಕಡಿತಗೊಳಿಸುವ ನಿರ್ಧಾರ ಕುರಿತಂತೆ ಅನಿಶ್ಚಿತತೆ ಮೂಡಿಸಿದೆ. ಇದರಿಂದ ಹೂಡಿಕೆದಾರರು ಸುರಕ್ಷಿತ ಹೂಡಿಕೆಯಾದ ಹಳದಿ ಲೋಹದತ್ತ ಚಿತ್ತ ನೆಟ್ಟಿದ್ದಾರೆ ಎಂದು ತಜ್ಞರು ಹೇಳಿದ್ದಾರೆ.

ಡಾಲರ್ ಮೌಲ್ಯ ಇಳಿಕೆ: ‘ಅಮೆರಿಕ ಮತ್ತು ಚೀನಾ ನಡುವಿನ ವ್ಯಾಪಾರ ಬಿಕ್ಕಟ್ಟು ಡಾಲರ್ ಸೂಚ್ಯಂಕಕ್ಕೆ ಪೆಟ್ಟು ನೀಡುತ್ತಿದೆ. ಇದರಿಂದ ರೂಪಾಯಿ ಸೇರಿ ಇತರೆ ವಿದೇಶಿ ಕರೆನ್ಸಿಗಳಿಗೆ ಬಲ ಬಂದಿದ್ದು, ಚಿನ್ನದ ಬೆಲೆ ಏರಿಕೆಗೆ ಕಾರಣವಾಗಿದೆ’ ಎಂದು ಕಾಮ ಜ್ಯುವೆಲ್ಲರಿಯ ವ್ಯವಸ್ಥಾಪಕ ನಿರ್ದೇಶಕ ಕಾಲಿನ್ ಶಾ ಹೇಳಿದ್ದಾರೆ.

ಬೆಂಗಳೂರಿನಲ್ಲಿ ದರ ಎಷ್ಟು?

ದೇಶದ ಸ್ಥಳೀಯ ಮಾರುಕಟ್ಟೆಯ ಬೇಡಿಕೆಗೆ ಅನುಗುಣವಾಗಿ ಮುಂಬೈ ದೆಹಲಿ ಕೋಲ್ಕತ್ತ ಬೆಂಗಳೂರು ಸೇರಿ ಮಹಾನಗರಗಳಲ್ಲಿ ಆಭರಣ ಚಿನ್ನದ ಬೆಲೆಯಲ್ಲಿ ವ್ಯತ್ಯಾಸ ಇರುತ್ತದೆ. ಬೆಂಗಳೂರಿನಲ್ಲಿ 10 ಗ್ರಾಂ ಆಭರಣ ಚಿನ್ನದ (ಶೇ 99.5 ಪರಿಶುದ್ಧತೆ) ಬೆಲೆಯು ₹1.05 ಲಕ್ಷ ಆಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.