ಚಿನ್ನದ ಬಾಂಡ್‌: ಗ್ರಾಂಗೆ ₹ 3,214 ನಿಗದಿ

7

ಚಿನ್ನದ ಬಾಂಡ್‌: ಗ್ರಾಂಗೆ ₹ 3,214 ನಿಗದಿ

Published:
Updated:

ನವದೆಹಲಿ: ಸೋಮವಾರದಿಂದ ಖರೀದಿಗೆ ಲಭ್ಯವಾಗಲಿರುವ ಚಿನ್ನದ ಬಾಂಡ್‌ಗಳ (ಎಸ್‌ಜಿಬಿ) ಬೆಲೆಯನ್ನು ಕೇಂದ್ರ ಸರ್ಕಾರ ಪ್ರತಿಗ್ರಾಂಗೆ ₹ 3,214ರಂತೆ ನಿಗದಿಪಡಿಸಿದೆ.

2018–19ರ ಐದನೇ ಕಂತಿನ ಚಿನ್ನದ ಬಾಂಡ್‌ ಖರೀದಿ ಅವಧಿ ಜನವರಿ 14ರಿಂದ 18ರವರೆಗೆ ಇರಲಿದೆ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ತಿಳಿಸಿದೆ.

ಆನ್‌ಲೈನ್‌ನಲ್ಲಿ ಖರೀದಿಸುವವರು ಮತ್ತು ನಗದುರಹಿತ (ಡಿಜಿಟಲ್‌) ರೂಪದಲ್ಲಿ ಪಾವತಿಸುವವರಿಗೆ ಬಾಂಡ್‌ನ ನೀಡಿಕೆ ಬೆಲೆಯಲ್ಲಿ ಪ್ರತಿ ಗ್ರಾಂಗೆ ₹ 50ರಂತೆ ಕಡಿತ ನೀಡಲು ಆರ್‌ಬಿಐ ನಿರ್ಧರಿಸಿದೆ ಎಂದು ಹಣಕಾಸು ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !