ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚಿನ್ನದ ಇಟಿಎಫ್‌: ₹2,920 ಕೋಟಿ ಹೂಡಿಕೆ

Published 11 ಜನವರಿ 2024, 16:17 IST
Last Updated 11 ಜನವರಿ 2024, 16:17 IST
ಅಕ್ಷರ ಗಾತ್ರ

ನವದೆಹಲಿ: ಚಿನ್ನದ ವಿನಿಮಯ ವಹಿವಾಟು ನಿಧಿಗಳಲ್ಲಿ (ಇಟಿಎಫ್‌) ಬಂಡವಾಳ ಹೂಡಿಕೆಯು 2022ಕ್ಕೆ ಹೋಲಿಸಿದರೆ 2023ರಲ್ಲಿ ಏರಿಕೆಯಾಗಿದೆ. ಜತೆಗೆ, ನಿರ್ವಹಣಾ ಸಂಪತ್ತಿನ ಮೌಲ್ಯವೂ ವೃದ್ಧಿಸಿದೆ ಎಂದು ಭಾರತೀಯ ಮ್ಯೂಚುವಲ್ ಫಂಡ್‌ ಕಂಪನಿಗಳ ಒಕ್ಕೂಟ (ಎಎಂಎಫ್ಐ) ತಿಳಿಸಿದೆ.

2022ರಲ್ಲಿ ₹459 ಕೋಟಿ ಹೂಡಿಕೆ ಆಗಿತ್ತು. 2023ರಲ್ಲಿ ₹2,920 ಕೋಟಿ ಹೂಡಿಕೆಯಾಗಿದೆ. ಒಟ್ಟಾರೆ ಆರು ಪಟ್ಟು ಏರಿಕೆಯಾಗಿದೆ. ಆಗಸ್ಟ್‌ನಲ್ಲಿ ₹1,028 ಕೋಟಿ ಹೂಡಿಕೆಯಾಗಿದೆ. ಇದು ತಿಂಗಳವಾರು ಲೆಕ್ಕದಲ್ಲಿ ಆಗಿರುವ ಗರಿಷ್ಠ ಹೂಡಿಕೆಯಾಗಿದೆ ಎಂದು ವಿವರಿಸಿದೆ.

‘ನಿರೀಕ್ಷೆಗಿಂತಲೂ ಹಣದುಬ್ಬರ ಮತ್ತು ಬಡ್ಡಿದರ ಹೆಚ್ಚಳವಾಗಿದೆ. ಹಾಗಾಗಿ, ಸಾಂಪ್ರದಾಯಿಕ ಚಿನ್ನದ ಹೂಡಿಕೆಯತ್ತ ಹೂಡಿಕೆದಾರರ ಚಿತ್ತ ಹರಿದಿದೆ. ಇಸ್ರೇಲ್ ಮತ್ತು ಹಮಾಸ್ ಬಂಡುಕೋರರ ನಡುವಿನ ಕದನದ ಸುತ್ತಲಿನ ಅನಿಶ್ಚಿತತೆ ಕೂಡ ಹೂಡಿಕೆದಾರರಲ್ಲಿ ಚಿನ್ನವು ಸುರಕ್ಷಿತ ಎನ್ನುವ ಭಾವನೆ ಮೂಡಿಸಿದೆ. ಈ ಅಂಶಗಳೇ ಬಂಡವಾಳದ ಒಳಹರಿವು ಹೆಚ್ಚಲು ಕಾರಣವಾಗಿವೆ’ ಎಂದು ಮಾರ್ನಿಂಗ್‌ಸ್ಟಾರ್ ಇನ್ವೆಸ್ಟ್‌ಮೆಂಟ್‌ ರಿಸರ್ಚ್‌ ಇಂಡಿಯಾದ ಸಹ ನಿರ್ದೇಶಕ ಹಿಮಾಂಶು ಶ್ರೀವಾಸ್ತವ್‌ ಹೇಳಿದ್ದಾರೆ.

ನಿಧಿ ನಿರ್ವಹಣಾ ಮೌಲ್ಯ ಹೆಚ್ಚಳ: ಚಿನ್ನದ ನಿಧಿಗಳ ನಿರ್ವಹಣಾ (ಎಯುಎಂ) ಮೌಲ್ಯವು ಶೇ 27ರಷ್ಟು ಏರಿಕೆ ಕಂಡಿದೆ. 2022ರ ಡಿಸೆಂಬರ್ ಅಂತ್ಯಕ್ಕೆ ನಿರ್ವಹಣಾ ಮೌಲ್ಯವು ₹21,455 ಕೋಟಿ ಇತ್ತು. 2023ರ ಡಿಸೆಂಬರ್‌ನಲ್ಲಿ ₹27,336 ಕೋಟಿಗೆ ಹೆಚ್ಚಳವಾಗಿದೆ.

2022ರ ಅಂತ್ಯದಲ್ಲಿ ಚಿನ್ನದ ಇಟಿಎಫ್‌ಗಳಲ್ಲಿ ಹೂಡಿಕೆದಾರರ ಖಾತೆಗಳ ಸಂಖ್ಯೆ 46.38 ಲಕ್ಷ ಇತ್ತು. 2023ರಲ್ಲಿ 49.11 ಲಕ್ಷಕ್ಕೆ ಏರಿಕೆ ಆಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT