ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿನ್ನದ ದರ 10 ಗ್ರಾಂಗೆ ₹ 420, ಬೆಳ್ಳಿ ₹ 869 ಇಳಿಕೆ

Last Updated 15 ಡಿಸೆಂಬರ್ 2022, 13:11 IST
ಅಕ್ಷರ ಗಾತ್ರ

ನವದೆಹಲಿ: ಇಲ್ಲಿನ ಚಿನಿವಾರ ಪೇಟೆಯಲ್ಲಿ ಗುರುವಾರ ಚಿನ್ನ, ಬೆಳ್ಳಿ ದರ ಇಳಿಕೆ ಕಂಡಿತು. ಚಿನ್ನದ ದರ10 ಗ್ರಾಂಗೆ ₹ 420ರಷ್ಟು ಇಳಿಕೆ ಕಂಡು ₹54,554ರಂತೆ ಮಾರಾಟವಾಯಿತು. ಬೆಳ್ಳಿ ಧಾರಣೆ ಕೆ.ಜಿಗೆ ₹869ರಷ್ಟು ಇಳಿಕೆಯಾಗಿ ಕೆ.ಜಿಗೆ ₹68,254ಕ್ಕೆ ತಲುಪಿತು.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ದರ ಇಳಿಕೆ ಆಗಿರುವುದರಿಂದ ದೇಶದ ಚಿನಿವಾರ ಪೇಟೆಯಲ್ಲಿಯೂ ಅದರ ಪರಿಣಾಮ ಕಂಡುಬಂದಿದೆ ಎಂದು ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್‌ ತಿಳಿಸಿದೆ.

ಹಣದುಬ್ಬರ ತಗ್ಗಿಸಲು ಬಡ್ಡಿದರ ಹೆಚ್ಚಳ ಮಾಡುವುದನ್ನು ಮುಂದುವರಿಸಲಾಗುವುದು ಎಂದು ಅಮೆರಿಕದ ಕೇಂದ್ರೀಯ ಬ್ಯಾಂಕ್‌, ಫೆಡರಲ್‌ ರಿಸರ್ವ್‌ನ ಅಧ್ಯಕ್ಷ ಜೆರೋಮ್ ಪೊವೆಲ್ ಹೇಳಿದ್ದಾರೆ. ಈ ಹೇಳಿಕೆಯು ಏಷ್ಯಾದಲ್ಲಿ ಚಿನ್ನದ ದರವನ್ನು ಇಳಿಕೆ ಆಗುವಂತೆ ಮಾಡಿದೆ ಎಂದು ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್‌ನ ಸಂಶೋಧನಾ ವಿಶ್ಲೇಷಕ ದಿಲೀಪ್‌ ಪಾರ್ಮರ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT