ಭಾನುವಾರ, ಆಗಸ್ಟ್ 1, 2021
21 °C

ಹಾಲ್‌ಮಾರ್ಕ್‌ನಿಂದ ಗ್ರಾಹಕರ ಹಕ್ಕು ರಕ್ಷಣೆ: ಜೋಯಾಲುಕ್ಕಾಸ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಕೇಂದ್ರ ಸರ್ಕಾರವು ಚಿನ್ನಾಭರಣಗಳಿಗೆ ಹಾಲ್‌ಮಾರ್ಕ್‌ ಕಡ್ಡಾಯಗೊಳಿಸಿರುವುದು ಗ್ರಾಹಕರ ಹಕ್ಕು ರಕ್ಷಿಸುವ ಉದ್ದೇಶ ಹೊಂದಿದೆ. ಈ ಕಾರಣದಿಂದಾಗಿ ನಾವು ಸರ್ಕಾರದ ನಿರ್ಧಾರವನ್ನು ಸ್ವಾಗತಿಸುತ್ತೇವೆ’ ಎಂದು ಜೋಯಾಲುಕ್ಕಾಸ್ ಸಮೂಹದ ಅಧ್ಯಕ್ಷ ಜೋಯ್ ಅಲುಕ್ಕಾಸ್ ಹೇಳಿದ್ದಾರೆ.

ಚಿನ್ನವು ಅತ್ಯಂತ ಸುರಕ್ಷಿತ ಹೂಡಿಕೆ ಆಯ್ಕೆ. ಸರ್ಕಾರದ ನಿರ್ಧಾರದಿಂದ ಚಿನ್ನಾಭರಣ ಮಾರುಕಟ್ಟೆಯಲ್ಲಿ ಹೊಸ ಯುಗದ ಆರಂಭ ಆಗಲಿದೆ. ಗ್ರಾಹಕರಿಗೆ ತಾವು ಖರೀದಿಸುವ ಆಭರಣವು ಶುದ್ಧ ಮತ್ತು ಗುಣಮಟ್ಟದಿಂದ ಕೂಡಿದೆ ಎನ್ನುವ ಖಾತರಿ ಸಿಗಲಿದೆ. ವಂಚನೆ ತಡೆಯಲೂ ನೆರವಾಗಲಿದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

‘ಜೋಯಾಲುಕ್ಕಾಸ್‌ ಕಂಪನಿಯು ಆರಂಭದಿಂದಲೂ ಹಾಲ್‌ಮಾರ್ಕ್‌ ಇರುವ ಚಿನ್ನಾಭರಣಗಳನ್ನು ಮಾತ್ರವೇ ಗ್ರಾಹಕರಿಗೆ ನೀಡುತ್ತಾ ಬಂದಿದೆ’ ಎಂದು ಅವರು ಹೇಳಿರುವುದಾಗಿ ಕಂಪನಿಯ ಪ್ರಕಟಣೆ ತಿಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು