ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿನ್ನದ ದರ ₹ 1,492 ಇಳಿಕೆ

Last Updated 20 ಆಗಸ್ಟ್ 2020, 11:34 IST
ಅಕ್ಷರ ಗಾತ್ರ

ನವದೆಹಲಿ: ಇಲ್ಲಿನ ಚಿನಿವಾರ ಪೇಟೆಯಲ್ಲಿ ಸತತ ಎರಡನೇ ದಿನವೂ ಚಿನ್ನ, ಬೆಳಿ ದರದಲ್ಲಿ ಇಳಿಕೆ ಆಗಿದೆ.

ಗುರುವಾರ, 10ಗ್ರಾಂ ಚಿನ್ನ₹ 1,492ರಷ್ಟು ಗರಿಷ್ಠ ಇಳಿಕೆ ಕಂಡು ₹ 52,819ರಲ್ಲಿ ಮಾರಾಟವಾಯಿತು. ಬುಧವಾರ ₹650ರಷ್ಟು ಇಳಿಕೆ ಕಂಡಿತ್ತು. ಬೆಳ್ಳಿ ದರ ಕೆ.ಜಿ.ಗೆ ₹ 1,476ರಷ್ಟು ಇಳಿಕೆಯಾಗಿ ₹ 67,924ಕ್ಕೆ ತಲುಪಿತು. ಬುಧವಾರ ₹ 3,112ರಷ್ಟು ಇಳಿಕೆಯಾಗಿತ್ತು.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನ, ಬೆಳ್ಳಿ ದರ ಇಳಿಕೆ ಆಗಿರುವುದೇ ದೇಶಿ ಮಾರುಕಟ್ಟೆಯಲ್ಲಿನ ಇಳಿಕೆಗೆ ಕಾರಣ ಎಂದು ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್‌ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT