ಬುಧವಾರ, 18 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಜಾಗತಿಕ ಮಟ್ಟದಲ್ಲಿ ತಗ್ಗಿದ ಬೇಡಿಕೆ: ಚಿನ್ನ, ಬೆಳ್ಳಿ ಬೆಲೆ ಅಲ್ಪ ಕುಸಿತ

Published : 9 ನವೆಂಬರ್ 2023, 12:58 IST
Last Updated : 9 ನವೆಂಬರ್ 2023, 13:06 IST
ಫಾಲೋ ಮಾಡಿ
Comments

ನವದೆಹಲಿ: ಜಾಗತಿಕ ಮಟ್ಟದಲ್ಲಿ ಚಿನ್ನ ಹಾಗೂ ಬೆಳ್ಳಿ ಲೋಹಗಳಿಗೆ ಬೇಡಿಕೆ ಇಳಿಮುಖವಾದ್ದರಿಂದ, ಚಿನಿವಾರ ಪೇಟೆಯಲ್ಲಿ 10 ಗ್ರಾಂ ಶುದ್ಧ ಬಂಗಾರದ ಬೆಲೆ ₹400ರಷ್ಟು ಇಳಿಕೆ ಕಂಡಿದೆ. ಇದರಿಂದಾಗಿ ಪ್ರತಿ ಹತ್ತು ಗ್ರಾಂ ಚಿನ್ನದ ಬೆಲೆ ₹60,950ರಷ್ಟು ಗುರುವಾರ ದಾಖಲಾಗಿದೆ. 

ಈ ಹಿಂದೆ ಪ್ರತಿ 10 ಗ್ರಾಂ ಚಿನ್ನಕ್ಕೆ ₹61,350ರಷ್ಟಿತ್ತು ಎಂದು ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್ ಹೇಳಿದೆ. ಅದರಂತೆಯೇ ಬೆಳ್ಳಿ ಬೆಲೆಯೂ ಗುರುವಾರ ₹300ರಷ್ಟು ಕುಸಿತ ಕಂಡಿದೆ. ಇದರಿಂದಾಗಿ ಪ್ರತಿ ಕೆ.ಜಿ. ಬೆಳ್ಳಿಗೆ ₹73,300ರಷ್ಟಾಗಿದೆ.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲೂ ಚಿನ್ನ ಹಾಗೂ ಬೆಳ್ಳಿ ದರ ಕುಸಿತ ಕಂಡಿದೆ. ಚಿನ್ನ ಹಾಗೂ ಬೆಳ್ಳಿ ಕ್ರಮವಾಗಿ ಪ್ರತಿ ಔನ್ಸ್‌ಗೆ 1,950 ಅಮೆರಿಕನ್ ಡಾಲರ್‌ ಹಾಗೂ 22.45 ಅಮೆರಿಕನ್ ಡಾಲರ್‌ನಷ್ಟು ದಾಖಲಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT