ಕಳೆದ ಹಲವು ತಿಂಗಳಿನಿಂದ ಏರುಗತಿಯಲ್ಲಿ ಸಾಗುತ್ತಿರುವ ಚಿನ್ನದ ದರ ಈ ವರ್ಷವೂ ಅದೇ ರೀತಿ ಮುಂದುವರಿಯಲಿದೆ ಎಂದು ಅಂದಾಜಿಸಲಾಗಿದೆ.
.ಚಿನ್ನ, ಬೆಳ್ಳಿ ಬೆಲೆ ಇಳಿಕೆ ಸಾಧ್ಯತೆ ಇಲ್ಲ: ಮಾರುಕಟ್ಟೆ ತಜ್ಞರ ಅಂದಾಜು.
ಜಾಗತಿಕ ಆರ್ಥಿಕ ಹಾಗೂ ರಾಜಕೀಯ ಬಿಕ್ಕಟ್ಟಿನಿಂದ ಚಿನ್ನದ ದರ ಏರಿಕೆಯಾಗುತ್ತಿದ್ದು, ಮುಂಬರುವ ತಿಂಗಳಲ್ಲಿ 10 ಗ್ರಾಂ ಚಿನ್ನದ ಬೆಲೆ ₹ 1,80,000ಕ್ಕೆ ಮುಟ್ಟುವ ಸಾಧ್ಯತೆ ಇದೆ ಎಂದು ತಜ್ಞರು ಅಂದಾಜಿಸಿದ್ದಾರೆ. ಇದು 2025ಕ್ಕಿಂತ ಶೇ 30ರಷ್ಟು ಹೆಚ್ಚು.

ಜನವರಿ 23ರಂದು ದೆಹಲಿಯಲ್ಲಿ 10 ಗ್ರಾಂ ಚಿನ್ನದ ಬೆಲೆ ₹ 1,500 ಏರಿಕೆಯಾಗಿ ₹ 1,58,700 ದಾಖಲಾಗಿತ್ತು. ಹಲವು ರಾಷ್ಟ್ರಗಳು ಚಿನ್ನದ ದಾಸ್ತಾನು ಮಾಡುತ್ತಿರುವುದೂ ಈ ಏರಿಕೆಗೆ ಕಾರಣ.

ರಿಫಿನಿಟಿವ್ ಹಾಗೂ ಏಂಜಲ್ ಒನ್ ಸಂಶೋಧನೆ ಪ್ರಕಾರ, 2025ರಲ್ಲಿ ಭಾರಿ ವೇಗವಾಗಿ ಚಿನ್ನದ ಬೆಲೆಯಲ್ಲಿ ಏರಿಕೆ ಕಂಡಿದೆ. ವರ್ಷಾಂತ್ಯಕ್ಕೆ 10 ಗ್ರಾಂ ಚಿನ್ನದ ಬೆಲೆ ₹ 1,38,000 ತಲುಪಿತ್ತು. 2024ರ ವರ್ಷಾಂತ್ಯಕ್ಕೆ ₹ 76,748 ಇತ್ತು. ಅಂದರೆ ಶೇ 80ರಷ್ಟು ಏರಿಕೆಯಾಗಿದೆ.
.ಹಟ್ಟಿ: ಚಿನ್ನ ಉತ್ಪಾದನೆ ಕುಸಿತ.
2025ರಲ್ಲಿ ಜಾಗತಿಕ ದರ ಶೇ 60–70ರಷ್ಟು ಏರಿಕೆಯಾಗಿದ್ದು, ಈ ವರ್ಷ ಈಗಾಗಲೇ ಶೇ 6ರಷ್ಟು ಏರಿಕೆ ಕಂಡಿದೆ ಎಂದು ವಲ್ಡ್ ಗೋಲ್ಡ್ ಕೌನ್ಸಿಲ್ ಹೇಳಿದೆ.

ಈ ಪ್ರಮಾಣದ ಬೆಲೆ ಏರಿಕೆಗೆ ಜಾಗತಿಕ ಅನಿಶ್ಚಿತತೆ ಮತ್ತು ಸುರಕ್ಷಿತ ಸ್ವತ್ತುಗಳ ಮೇಲಿನ ಅವಲಂಬನೆಯೇ ಕಾರಣ ಎಂದು ವಿಶ್ಲೇಷಕರು ಹೇಳುತ್ತಾರೆ. ‘ಸದ್ಯದ ಜಾಗತಿಕ ಅನಿಶ್ಚಿತತೆ ಕನಿಷ್ಠ 6 ತಿಂಗಳು ಮುಂದುವರಿಯುವ ಸಾಧ್ಯತೆ ಇದೆ’ ಎಂದು ಏಂಜಲ್ ಒನ್ನ ಕೃಷಿಯೇತರ ಸರಕುಗಳು ಮತ್ತು ಕರೆನ್ಸಿ ವಿಭಾಗದ ಸಂಶೋಧಕ ಪ್ರಥಮೇಶ್ ಮಲ್ಯ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

‘ಚಿನ್ನದ ದರ 10 ಗ್ರಾಂಗೆ ₹ 1.5ಲಕ್ಷ ತಲುಪಿದ್ದು, ಇನ್ನೂ ಏರಿಕೆಯಾಗಲಿದೆ. ಸುಂಕ, ಜಾಗತಿಕ ರಾಜಕೀಯ ಬಿಕ್ಕಟ್ಟು, ಬಡ್ಡಿದರ ಕಡಿತ, ಕೇಂದ್ರ ಬ್ಯಾಂಕ್ಗಳಿಂದ ಚಿನ್ನ ಶೇಖರಣೆ ಮುಂತಾದ ಅಂಶಗಳಿಂದಾಗಿ ಜಾಗತಿಕವಾಗಿ ಚಿನ್ನದ ದರ ಒಂದು ಔನ್ಸ್ಗೆ $5,500 (ಒಂದು ಔನ್ಸ್ 28.34 ಗ್ರಾಂ) ತಲುಪಲಿದೆ. ದೇಶಿಯವಾಗಿ 10 ಗ್ರಾಂ ಚಿನ್ನದ ಬೆಲೆ ₹ 1,72,000 ತಲುಪಲಿದೆ’ ಎಂದು ಅವರು ಹೇಳಿದರು.
.Gold Silver Rate: ಚಿನ್ನ, ಬೆಳ್ಳಿ ಬೆಲೆ ಇಳಿಕೆ.
‘ಚಿನ್ನದ ಮೇಲಿನ ಹೂಡಿಕೆ ಹೆಚ್ಚಳವಾಗುತ್ತಿದೆ. ಅಪಾಯ ಕಡಿಮೆ ಇರುವುದರಿಂದ ಹೂಡಿಕೆ ಪ್ರಮಾಣವು ಹೆಚ್ಚಳವಾಗುತ್ತಿದೆ. ಚಿನ್ನದ ಬೆಲೆ ಇನ್ನಷ್ಟು ಏರಿಕೆಯಾಗಲಿದೆ’ ಎಂದು ಎಷ್ಡಿಎಫ್ಸಿ ಸೆಕ್ಯೂರಿಟೀಸ್ನ ಹಿರಿಯ ವಿಶ್ಲೇಷಕ ಸೌಮಿಲ್ ಗಾಂಧಿ ಹೇಳಿದರು.

ಜಾಗತಿಕ ಆರ್ಥಿಕ ಹಾಗೂ ರಾಜಕೀಯ ಅನಿಶ್ಚಿತತೆ, ವ್ಯಾಪಾರ ಬಿಕ್ಕಟ್ಟು, ಡಾಲರ್ ಮೌಲ್ಯವರ್ಧನೆ, ಈಕ್ವಿಟಿಗಳಲ್ಲಿ ಚಂಚಲತೆ ಹಾಗೂ ಚಿನ್ನದ ಮೇಲೆ ಹೂಡಿಗೆ ಸುರಕ್ಷಿತ ಎನ್ನುವ ಭಾವನೆ ಹಳದಿ ಲೋಕದ ಬೆಲೆ ವರ್ಧನೆಗೆ ಕಾರಣವಾಗಿದೆ.

ಸೌಮಿಲ್ ಪ್ರಕಾರ 10 ಗ್ರಾಂ ಚಿನ್ನದ ಬೆಲೆ ₹ 1,66,125 ರಿಂದ ₹ 1,79,323ಕ್ಕೆ ತಲುಪಬಹುದು.
.ಭಾರತ–ಚೀನಾ ಯುದ್ಧದ ವೇಳೆ 600KG ಚಿನ್ನ ನೀಡಿದ್ದ ಮಹಾರಾಣಿ ಕಾಮಸುಂದರಿ ದೇವಿ ನಿಧನ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.