ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಷ್ಯಾ ಮೇಲೆ ಕಠಿಣ ಆರ್ಥಿಕ ನಿರ್ಬಂಧ: ಚಿನ್ನದ ದರ ₹ 1,660ರಷ್ಟು ಇಳಿಕೆ

Last Updated 25 ಫೆಬ್ರುವರಿ 2022, 13:52 IST
ಅಕ್ಷರ ಗಾತ್ರ

ಬೆಂಗಳೂರು: ಐರೋಪ್ಯ ಒಕ್ಕೂಟವು ರಷ್ಯಾದ ಮೇಲೆ ಕಠಿಣ ಆರ್ಥಿಕ ನಿರ್ಬಂಧ ಹೇರಿರುವುದರಿಂದ ಜಾಗತಿಕ ಮಾರುಕಟ್ಟೆಯಲ್ಲಿ ಶುಕ್ರವಾರ ಚಿನ್ನ, ಬೆಳ್ಳಿ ದರ ಇಳಿಕೆ ಕಂಡಿತು. ಇದರಿಂದಾಗಿ ದೇಶಿ ಚಿನಿವಾರ ಪೇಟೆಗಳಲ್ಲಿಯೂ ಚಿನ್ನ, ಬೆಳ್ಳಿ ದರ ಕಡಿಮೆ ಆಯಿತು.

ಬೆಂಗಳೂರಿನಲ್ಲಿ 10 ಗ್ರಾಂ ಚಿನ್ನದ ದರ ₹ 1,660ರಷ್ಟು ಕಡಿಮೆ ಆಗಿ ₹ 52,280ಕ್ಕೆ ತಲುಪಿತು. ಬೆಳ್ಳಿ ಧಾರಣೆ ಕೆ.ಜಿ.ಗೆ ₹ 1,900ರಷ್ಟು ಕಡಿಮೆ ಆಗಿ ₹ 67,100ಕ್ಕೆ ತಲುಪಿದೆ ಎಂದು ಬೆಂಗಳೂರು ಚಿನ್ನಾಭರಣ ವರ್ತಕರ ಸಂಘ ತಿಳಿಸಿದೆ.

ದೆಹಲಿಯಲ್ಲಿ ಚಿನ್ನದ ದರ ₹ 1,274ರಷ್ಟು ಕಡಿಮೆ ಆಗಿದ್ದು 10 ಗ್ರಾಂಗೆ ₹ 50,913ಕ್ಕೆ ಇಳಿಕೆ ಆಗಿದೆ. ಬೆಳ್ಳಿ ಧಾರಣೆ ಕೆ.ಜಿಗೆ ₹ 2,219ರಷ್ಟು ಇಳಿಕೆ ಆಗಿ ₹ 64,809ರಂತೆ ಮಾರಾಟ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT