ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಂಗಳೂರಿನಲ್ಲಿ ₹75 ಸಾವಿರ ದಾಟಿದ ಚಿನ್ನದ ದರ

Published 16 ಏಪ್ರಿಲ್ 2024, 13:43 IST
Last Updated 16 ಏಪ್ರಿಲ್ 2024, 13:43 IST
ಅಕ್ಷರ ಗಾತ್ರ

ನವದೆಹಲಿ/ ಬೆಂಗಳೂರು: ಮಧ್ಯಪ್ರಾಚ್ಯ ಬಿಕ್ಕಟ್ಟಿನಿಂದಾಗಿ ಚಿನ್ನದ ದರವು ಮಂಗಳವಾರ ಮತ್ತೆ ಏರಿಕೆಯಾಗಿದೆ. ಬೆಂಗಳೂರಿನಲ್ಲಿ 10 ಗ್ರಾಂ ಚಿನ್ನದ ₹75,820ರಂತೆ ಮಾರಾಟವಾಗಿದ್ದರೆ, ಕೆ.ಜಿ ಬೆಳ್ಳಿ ಧಾರಣೆಯು ₹86,200ಕ್ಕೆ ಮುಟ್ಟಿದೆ.

ನವದೆಹಲಿಯ ಚಿನಿವಾರ ಪೇಟೆಯಲ್ಲಿ ಚಿನ್ನದ ದರವು 10 ಗ್ರಾಂ.ಗೆ ₹700 ಹೆಚ್ಚಳವಾಗಿ 73,750ರಂತೆ ಮಾರಾಟವಾಗಿದೆ. ಬೆಳ್ಳಿಯು ಕೆ.ಜಿಗೆ ₹800 ಏರಿಕೆಯಾಗಿ ₹86,500ಕ್ಕೆ ಮುಟ್ಟಿದೆ.

ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ಧಾರಣೆಯು ಒಂದು ಔನ್ಸ್‌ಗೆ (28.34 ಗ್ರಾಂ) ಕ್ರಮವಾಗಿ 2,370 ಡಾಲರ್‌ (ಅಂದಾಜು ₹1.98 ಲಕ್ಷ) ಮತ್ತು 28.40 (ಅಂದಾಜು ₹2,374) ಡಾಲರ್‌ನಂತೆ ಮಾರಾಟವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT