ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚಿನ್ನದ ದರ ₹220, ಬೆಳ್ಳಿ ₹1,050 ಏರಿಕೆ

Published 27 ಮೇ 2024, 14:09 IST
Last Updated 27 ಮೇ 2024, 14:09 IST
ಅಕ್ಷರ ಗಾತ್ರ

ನವದೆಹಲಿ: ಸತತ ಮೂರು ದಿನಗಳಿಂದ ಇಳಿಕೆಯಾಗಿದ್ದ ಚಿನ್ನ ಮತ್ತು ಬೆಳ್ಳಿ ಧಾರಣೆಯು ಸೋಮವಾರ ಏರಿಕೆ ಕಂಡಿದೆ.

ಇಲ್ಲಿನ ಚಿನಿವಾರ ಪೇಟೆಯಲ್ಲಿ 10 ಗ್ರಾಂ ಚಿನ್ನದ ದರವು ₹220 ಏರಿಕೆಯಾಗಿ ₹72,820ರಂತೆ ಮಾರಾಟವಾಗಿದೆ. ಬೆಳ್ಳಿ ಧಾರಣೆಯು ಕೆ.ಜಿಗೆ ₹1,050 ಹೆಚ್ಚಳವಾಗಿ ₹92,850ಕ್ಕೆ ಮುಟ್ಟಿದೆ. 

ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ಧಾರಣೆಯು ಒಂದು ಔನ್ಸ್‌ಗೆ (28.34 ಗ್ರಾಂ) ಕ್ರಮವಾಗಿ 2,344 ಡಾಲರ್‌ (ಅಂದಾಜು ₹1.94 ಲಕ್ಷ) ಮತ್ತು 30.75 ಡಾಲರ್‌ನಂತೆ (ಅಂದಾಜು ₹2,556) ಮಾರಾಟವಾಗಿದೆ.

ಡಾಲರ್ ಬೆಲೆ ಇಳಿಕೆ, ಮಧ್ಯಪ್ರಾಚ್ಯ ಬಿಕ್ಕಟ್ಟಿನಿಂದಾಗಿ ಹೂಡಿಕೆದಾರರು ಹಳದಿ ಲೋಹದತ್ತ ಗಮನ ನೀಡಿದ್ದಾರೆ. ಇದರಿಂದ ಚಿನ್ನದ ದರವು ಏರಿಕೆಯಾಗಿದೆ ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT