ನವದೆಹಲಿ: ಇಲ್ಲಿನ ಚಿನಿವಾರ ಪೇಟೆಯಲ್ಲಿ ಶುಕ್ರವಾರ ನಡೆದ ವಹಿವಾಟಿನಲ್ಲಿ ಚಿನ್ನದ ದರ ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಏರಿಕೆ ಆಗಿದ್ದರೆ, ಬೆಳ್ಳಿ ಬೆಲೆ ಇಳಿಕೆಯಾಗಿದೆ.

10 ಗ್ರಾಂ ಚಿನ್ನದ (ಶೇ 99.9ರಷ್ಟು ಪರಿಶುದ್ಧತೆ) ದರವು ₹3,200 ಹೆಚ್ಚಳವಾಗಿ, ₹1,34,800ರಂತೆ ಮಾರಾಟವಾಗಿದೆ. ಆಭರಣ ಚಿನ್ನದ (ಶೇ 99.5ರಷ್ಟು ಪರಿಶುದ್ಧತೆ) ಬೆಲೆ ಇಷ್ಟೇ ಪ್ರಮಾಣದಲ್ಲಿ ಏರಿಕೆಯಾಗಿ, ₹1,34,200 ಆಗಿದೆ. ಆದರೆ, ಬೆಳ್ಳಿ ಧಾರಣೆ ಕೆ.ಜಿಗೆ ₹7 ಸಾವಿರ ಕಡಿಮೆಯಾಗಿ, ₹1.77 ಲಕ್ಷವಾಗಿದೆ ಎಂದು ಅಖಿಲ ಭಾರತ ಸರಾಫ್ ಅಸೋಸಿಯೇಷನ್ ತಿಳಿಸಿದೆ.

ಚಿನ್ನಾಭರಣಗಳ ಖರೀದಿಗೆ ಶುಭ ದಿನ ಎಂದು ಧನತ್ರಯೋದಶಿ ಪರಿಗಣಿತವಾಗಿದೆ. ಇದು ಹತ್ತಿರವಾಗುತ್ತಿರುವ ಕಾರಣಕ್ಕೆ ಆಭರಣ ತಯಾರಕರು ಮತ್ತು ಮಾರಾಟಗಾರರಿಂದ ಚಿನ್ನದ ಖರೀದಿ ಹೆಚ್ಚಳವಾಗಿದೆ. ಇದರಿಂದ ಹಳದಿ ಲೋಹದ ಬೆಲೆ ಏರಿಕೆಯಾಗಿದೆ ಎಂದು ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.