ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಫ್ತುದಾರರಿಗೆ ತೆರಿಗೆ ಮೊತ್ತ ಹಿಂದಿರುಗಿಸುವ ವಿವರ ಪ್ರಕಟ

Last Updated 18 ಆಗಸ್ಟ್ 2021, 4:02 IST
ಅಕ್ಷರ ಗಾತ್ರ

ನವದೆಹಲಿ: ರಫ್ತು ಉತ್ತೇಜನ ಯೋಜನೆಯ (ಆರ್‌ಒಡಿಟಿಇಪಿ) ಅಡಿಯಲ್ಲಿ ಒಟ್ಟು 8,555 ವಸ್ತುಗಳಿಗೆ ಎಷ್ಟು ಪ್ರಮಾಣದಲ್ಲಿ ತೆರಿಗೆಯನ್ನು ಹಿಂದಿರುಗಿಸಲಾಗುತ್ತದೆ ಎಂಬ ವಿವರವನ್ನು ಕೇಂದ್ರ ಸರ್ಕಾರವು ಮಂಗಳವಾರ ಪ್ರಕಟಿಸಿದೆ.

ಈ ಯೋಜನೆಯ ಅಡಿಯಲ್ಲಿ ತೆರಿಗೆ ಮೊತ್ತ ಹಿಂದಿರುಗಿಸಲು ಕೇಂದ್ರವು ಈ ವರ್ಷಕ್ಕೆ ₹ 12,454 ಕೋಟಿ ನಿಗದಿ ಮಾಡಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವಸ್ತುಗಳ ತಯಾರಿಕೆಯಲ್ಲಿ ಬಳಕೆಯಾಗುವ ಇತರ ಹಲವು ವಸ್ತುಗಳಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿಧಿಸುವ ವಿವಿಧ ತೆರಿಗೆ, ಲೆವಿಯನ್ನು ಈ ಯೋಜನೆಯ ಅಡಿಯಲ್ಲಿ ರಫ್ತುದಾರರಿಗೆ ಹಿಂದಿರುಗಿಸಲಾಗುತ್ತದೆ.

ಉಕ್ಕು, ರಾಸಾಯನಿಕಗಳು ಮತ್ತು ಫಾರ್ಮಾ ವಲಯಕ್ಕೆ ಈ ಯೋಜನೆಯ ಪ್ರಯೋಜನ ಸಿಗುವುದಿಲ್ಲ. ವಿದ್ಯುತ್ ಶುಲ್ಕದ ಮೇಲಿನ ಸುಂಕ, ಇಂಧನ ಸಾಗಾಟದ ಮೇಲಿನ ವ್ಯಾಟ್‌, ಮಂಡಿ ತೆರಿಗೆ, ಮುದ್ರಾಂಕ ಶುಲ್ಕ ವಿನಾಯಿತಿಗಳು ಭಾರತದ ಉತ್ಪನ್ನಗಳನ್ನು ಜಾಗತಿಕ ಮಾರುಕಟ್ಟೆಗಳಲ್ಲಿ ಹೆಚ್ಚು ಸ್ಪರ್ಧಾತ್ಮಕ ಆಗಿಸುತ್ತವೆ ಎಂದು ಕೇಂದ್ರ ಹೇಳಿದೆ.

ತೆರಿಗೆ ಮೊತ್ತದಲ್ಲಿ ಶೇ 0.5ರಿಂದ ಶೇ 4.3ರವರೆಗೆ ಹಿಂದಿರುಗಿಸಲಾಗುತ್ತದೆ. ಬೇರೆ ಬೇರೆ ವಲಯಗಳಿಗೆ ಬೇರೆ ಬೇರೆ ಪ್ರಮಾಣದಲ್ಲಿ ಈ ಮೊತ್ತ ಸಿಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT