ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಲದ ಆ್ಯಪ್‌ಗಳ ಜಾಹೀರಾತಿಗೆ ನಿರ್ಬಂಧ: ಕೇಂದ್ರ

Published 27 ಡಿಸೆಂಬರ್ 2023, 21:50 IST
Last Updated 27 ಡಿಸೆಂಬರ್ 2023, 21:50 IST
ಅಕ್ಷರ ಗಾತ್ರ

ನವದೆಹಲಿ : ಜನರಿಗೆ ಸಾಲದ ಆಮಿಷವೊಡ್ಡಿ ಹಣ ವಂಚಿಸುವ ಆ್ಯಪ್‌ಗಳ ಜಾಹೀರಾತುಗಳನ್ನು ಪ್ರಸಾರ ಮಾಡದಂತೆ ಸಾಮಾಜಿಕ ಜಾಲತಾಣಗಳು ಹಾಗೂ ಡಿಜಿಟಲ್‌ ಸೇವಾ ತಾಣಗಳಿಗೆ ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವಾಲಯ ಸೂಚಿಸಿದೆ.

ಇಂಟರ್‌ನೆಟ್‌ ಸೇವೆ ಬಳಸಿಕೊಂಡು ಈ ಆ್ಯಪ್‌ಗಳು ಜನರನ್ನು ದಾರಿತಪ್ಪಿಸುವ ಜೊತೆಗೆ ಶೋಷಿಸುತ್ತಿವೆ. ಸಚಿವಾಲಯವು ಇಂತಹ ಆ್ಯಪ್‌ಗಳ ವಿರುದ್ಧ ಕ್ರಮಕ್ಕೆ ಮುಂದಾಗಿದೆ. ಹಾಗಾಗಿ, ಇವುಗಳು ನೀಡುವ ಜಾಹೀರಾತುಗಳ ಪ್ರಸಾರಕ್ಕೆ ನಿರ್ಬಂಧ ಹೇರಲಾಗಿದೆ’ ಎಂದು ಕೇಂದ್ರ ಎಲೆಕ್ಟ್ರಾನಿಕ್ಸ್‌ ಮತ್ತು ಮಾಹಿತಿ ತಂತ್ರಜ್ಞಾನ ಖಾತೆಯ ರಾಜ್ಯ ಸಚಿವ ರಾಜೀವ್‌ ಚಂದ್ರಶೇಖರ್‌ ತಿಳಿಸಿದ್ದಾರೆ.

‘ಹಲವು ಜಾಲತಾಣಗಳು ಈ ಆ್ಯಪ್‌ಗಳ ಜಾಹೀರಾತು ಪ್ರಚಾರ ಮಾಡುತ್ತಿವೆ.  ಯಾವುದೇ ಜಾಲತಾಣಗಳು ಮಧ್ಯವರ್ತಿಯಾಗಿ ಜಾಹೀರಾತು ಪ್ರಚಾರದಲ್ಲಿ ತೊಡಗಬಾರದು. ಕಡ್ಡಾಯವಾಗಿ ಐ.ಟಿ ನಿಯಮಾವಳಿಗಳನ್ನು ಪಾಲಿಸಬೇಕು ಎಂದು ಸೂಚಿಸಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT