ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಡಗು, ಕೇರಳ, ಮಾಹೆಯಲ್ಲಿ ಜಿಎಸ್‌ಟಿಆರ್‌–3ಬಿ ಸಲ್ಲಿಕೆ ಅವಧಿ ವಿಸ್ತರಣೆ

Last Updated 21 ಆಗಸ್ಟ್ 2018, 16:27 IST
ಅಕ್ಷರ ಗಾತ್ರ

ನವದೆಹಲಿ:ಪ್ರವಾಹ ಪೀಡಿತಕೊಡಗು, ಕೇರಳ ಮತ್ತು ಪುದುಚೆರಿಯ ಮಾಹೆಯಲ್ಲಿ ಜಿಎಸ್‌ಟಿಆರ್‌–3ಬಿ ಸಲ್ಲಿಕೆ ಅವಧಿಯನ್ನುವಿಸ್ತರಿಸಲಾಗಿದೆ.

ಪ್ರವಾಹ ಪೀಡಿತ ಸಂತ್ರಸ್ತರ ನಿಧಿಗೆ ನೀಡುವ ಸರಕುಗಳಿಗೆ ಕಸ್ಟಮ್ಸ್‌ ಸುಂಕ ಮತ್ತು ಐಜಿಎಸ್‌ಟಿಯಿಂದ ವಿನಾಯ್ತಿಯನ್ನೂ ನೀಡಲಾಗಿದೆ.

‘ಜುಲೈ ತಿಂಗಳ ಸರಕು ಮತ್ತು ಸೇವೆಗಳ ಮಾರಾಟದ ಅಂತಿಮ ರಿಟರ್ನ್‌ (ಜಿಎಸ್‌ಟಿಆರ್‌–3ಬಿ) ಸಲ್ಲಿಕೆಗೆ ಆಗಸ್ಟ್‌ 20 (ಸೋಮವಾರ) ಅಂತಿಮ ದಿನವಾಗಿತ್ತು. ಆದರೆ, ಈ ಪ್ರದೇಶಗಳಲ್ಲಿ ಭಾರಿ ಪ್ರವಾಹ ಉಂಟಾಗಿರುವುದರಿಂದ ರಿಟರ್ನ್‌ ಸಲ್ಲಿಕೆ ಅವಧಿಯನ್ನು ಅಕ್ಟೋಬರ್‌ 5ರವರೆಗೆ ವಿಸ್ತರಿಸಲಾಗಿದೆ.

‘ಈ ಪ್ರದೇಶಗಳಲ್ಲಿ ಜುಲೈ ತಿಂಗಳಿನಜಿಎಸ್‌ಟಿಆರ್–1 ಸಲ್ಲಿಸಲು ಅಕ್ಟೋಬರ್‌ 5 ಹಾಗೂ ಆಗಸ್ಟ್‌ ತಿಂಗಳ ರಿಟರ್ನ್‌ ಸಲ್ಲಿಸಲು ಅಕ್ಟೋಬರ್ 10ರವರೆಗೆ ಅವಕಾಶ ನೀಡಲಾಗಿದೆ’ ಎಂದು ಕೇಂದ್ರ ಹಣಕಾಸು ಸಚಿವ ಪೀಯೂಷ್‌ ಗೋಯಲ್‌ ತಿಳಿಸಿದ್ದಾರೆ.

ದೇಶದಾದ್ಯಂತ ಜಿಎಸ್‌ಟಿಆರ್‌–3ಬಿ ಸಲ್ಲಿಕೆ ಅವಧಿಯು‘ಆಗಸ್ಟ್‌ 20 ರಿಂದ ಆಗಸ್ಟ್‌ 24ಕ್ಕೆ ವಿಸ್ತರಣೆಯಾಗಿದೆ.

₹1.5 ಕೋಟಿವರೆಗೆ ವಾರ್ಷಿಕ ವಹಿವಾಟು ನಡೆಸುವವರಿಗೆ ಜುಲೈ–ಸೆಪ್ಟೆಂಬರ್‌ ಅವಧಿಯ ಜಿಎಸ್‌ಟಿಆರ್‌–1 ಸಲ್ಲಿಸಲು ನವೆಂಬರ್‌ 15ರವರೆಗೆ ಅವಕಾಶವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT