ಬೆಂಗಳೂರು: ನಟ ದರ್ಶನ್ ಅಭಿನಯದ ‘ದಿ ಡೆವಿಲ್’ ಸಿನಿಮಾ ಇಂದು (ಗುರುವಾರ) ಬಿಡುಗಡೆಯಾಗಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಅಭಿಮಾನಿಗಳು ಕೂಡ ಸಿನಿಮಾ ನೋಡಿ ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಈ ನಡುವೆ ಬುಕ್ ಮೈ ಶೋ ಅಪ್ಲಿಕೇಷನ್ನಲ್ಲಿ ನೀಡುವ ರೇಟಿಂಗ್ ಮಾಯವಾಗಿರುವುದು ಬೆಳಕಿಗೆ ಬಂದಿದೆ.

‘ಡೆವಿಲ್’ ಸಿನಿಮಾಗೆ ಕೆಲವರು ಉದ್ದೇಶಪೂರ್ವಕವಾಗಿ ನೆಗೆಟಿವ್ ವಿಮರ್ಶೆ ನೀಡುವ ಭಯ ಇರುವುದರಿಂದ ಡೆವಿಲ್ ಚಿತ್ರತಂಡ ಕೋರ್ಟ್ನಿಂದ ಆದೇಶ ಒಂದನ್ನು ತಂದಿದೆ. ಅದರಂತೆ, ಟಿಕೆಟ್ ಬುಕಿಂಗ್ ಅಪ್ಲಿಕೇಷನ್ ಆಗಿರುವ ಬುಕ್ ಮೈ ಶೋನಲ್ಲಿ ರೇಟಿಂಗ್ ನೀಡುವ ಅವಕಾಶ ರದ್ದುಗೊಳಿಸಲಾಗಿದೆ.

ಸಿನಿಮಾ ನೋಡಿದ ನಂತರ ಬುಕ್ ಮೈ ಶೋ ಅಪ್ಲಿಕೇಷನ್ ಮೂಲಕ ರೇಟಿಂಗ್ ನೀಡುವ ಅವಕಾಶವನ್ನು ತಪ್ಪಿಸಲಾಗಿದೆ. ಇಲ್ಲಿ ಸಿನಿಮಾ ವೀಕ್ಷಣೆ ಮಾಡಿದವರಿಗೆ ಮಾತ್ರ ರೇಟಿಂಗ್ ನೀಡುವ ಅವಕಾಶ ಇರುತ್ತದೆ. ಇದನ್ನು ನಿಖರವಾದ ವಿಮರ್ಶೆ ಎಂದು ಹೇಳಲು ಸಾಧ್ಯವಿಲ್ಲ. ಆದರೆ, ಕೆಲವರು ಸಿನಿಮಾ ಚೆನ್ನಾಗಿದ್ದರೂ ಬೇರೆ ಬೇರೆ ಕಾರಣಕ್ಕೆ ಋಣಾತ್ಮಕ ವಿಮರ್ಶೆ ನೀಡುವ ಸಾಧ್ಯತೆ ಇರುತ್ತದೆ. ಇದೇ ಕಾರಣಕ್ಕೆ ಡೆವಿಲ್ ಸಿನಿಮಾ ನೋಡಿದ ಬಳಿಕ ಬುಕ್ ಮೈ ಶೋನಲ್ಲಿ ರೇಟಿಂಗ್ ಕೊಡುವ ಅವಕಾಶವನ್ನು ತಪ್ಪಿಸಲಾಗಿದೆ.

ಸಿನಿಮಾ ನೋಡಿದ ಬಳಿಕ ಅನೇಕರು ಬುಕ್ ಮೈ ಶೋನಲ್ಲಿ ರೇಟಿಂಗ್ ಕೊಡಲು ಮುಂದಾದಾಗ, ಅದು ಸಾಧ್ಯವಾಗಿಲ್ಲ. ಅಲ್ಲಿ ‘ಕೋರ್ಟ್ ಆದೇಶದಂತೆ ರೇಟಿಂಗ್ ಹಾಗೂ ವಿಮರ್ಶೆಯನ್ನು ನಿಷ್ಕ್ರಿಯಗೊಳಿಸಲಾಗಿದೆ’ ಎನ್ನುವ ಸಂದೇಶ ಕಾಣುತ್ತಿದೆ.
.ಜೈಲಿನಲ್ಲಿರುವಾಗಲೇ ದಿ ಡೆವಿಲ್ ಸಿನಿಮಾ ಬಿಡುಗಡೆ: ನಟ ದರ್ಶನ್ ಹೆಸರಿಗೆ ಹೊಸ ದಾಖಲೆ.ದರ್ಶನ್ರ The Devilಗೆ ಅಭಿಮಾನಿಗಳು ಫುಲ್ ಮಾರ್ಕ್ಸ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.