ಹೈದರಾಬಾದ್: ಇತ್ತೀಚೆಗೆ ನಡೆದ ತೆಲಂಗಾಣ ರೈಸಿಂಗ್ ಗ್ಲೋಬಲ್ ಶೃಂಗಸಭೆಯಲ್ಲಿ ತೆಲುಗು ನಟ ಚಿರಂಜೀವಿ ನೀಡಿದ ಹೇಳಿಕೆ ಇದೀಗ ವಿವಾದ ಸೃಷ್ಟಿಸಿದೆ.

ಚಿರಂಜೀವಿ ಹೇಳಿಕೆ ಸಂಬಂಧ ಸಾಮಾಜಿಕ ಮಾಧ್ಯಮಗಳಲ್ಲಿ ಟೀಕೆಗಳು ವ್ಯಕ್ತವಾಗುತ್ತಿದೆ.

ಈ ಕಾರ್ಯಕ್ರಮದಲ್ಲಿ ನೀತಿ ಆಯೋಗದ ಉಪಾಧ್ಯಕ್ಷೆ ಸುಮನ್ ಬೇರಿ ಮತ್ತು ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ ಅವರೊಂದಿಗೆ ನಟ ಭಾಗಿಯಾಗಿದ್ದರು.
.ದ್ವೇಷ ಭಾಷಣ ಪ್ರಕರಣ: RSS ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ಗೆ ನಿರೀಕ್ಷಣಾ ಜಾಮೀನು.ಅಕ್ರಮ ವಲಸಿಗರನ್ನು ಪತ್ತೆ ಹಚ್ಚುವುದು, ಗಡೀಪಾರು ಮಾಡುವುದೇ NDA ನೀತಿ: ಅಮಿತ್ ಶಾ.
ಈ ವೇಳೆ ಕಾರ್ಯಕ್ರಮದಲ್ಲಿ ಮಾತನಾಡಿದ ಚಿರಂಜೀವಿ, ನನ್ನನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲು ಬಂದಾಗ ನಾನು ಯಾವ ಸ್ಥಾನದಲ್ಲಿದ್ದೆ ಎಂದು ನಿಮಗೆ ತಿಳಿದಿದೆಯೇ?, ನಾನು ಅನ್ನಪೂರ್ಣ ಸ್ಟುಡಿಯೋದಲ್ಲಿ 'ಒಬ್ಬ ಹುಡುಗಿಯ ಜೊತೆ ನೃತ್ಯ ಮಾಡುತ್ತಿದ್ದೆ'. ನನಗೆ ತುಂಬಾ ಮುಜುಗರವಾಯಿತು. ಸ್ವಲ್ಪ ಸಮಯದವರೆಗೆ ಶೂಟಿಂಗ್ ನಿಲ್ಲಿಸಲು ಚಿತ್ರತಂಡದವರನ್ನು ಕೇಳಿದ್ದೆ ಎಂದಿದ್ದರು.
.ಸಿನಿಮಾದ ಯಶಸ್ಸಿನ ಮೂಲಕ ಉತ್ತರಿಸೋಣ: 'ಡೆವಿಲ್' ರಿಲೀಸ್ಗೂ ಮುನ್ನ ದರ್ಶನ್ ಸಂದೇಶ.ಮೈಯಲ್ಲಿ ದೆವ್ವ ಹೊಕ್ಕಿದೆ ಎಂದು ಮೌಢ್ಯ ಮೆರೆದ ಪತಿ ಕುಟುಂಬ: ಪತ್ನಿ ದೂರು.
ಆದರೆ ಚಿರಂಜೀವಿ ನೀಡಿದ ಹೇಳಿಕೆ ಸರಿ ಇಲ್ಲ. 'ಒಬ್ಬ ಹುಡುಗಿ ಜತೆ ನೃತ್ಯ ಮಾಡುತ್ತಿದ್ದೆ' ಎನ್ನುವ ಬದಲು ಬೇರೆ ರೀತಿಯಲ್ಲಿ ಹೇಳಬಹುದಿತ್ತು. ಅವರ ಹೇಳಿಕೆ ಅನಗತ್ಯ, ನುಡಿಗಟ್ಟು ವಿಚಿತ್ರವಾಗಿತ್ತು, ವೇದಿಕೆ ಕಾರ್ಯಕ್ರಮದಲ್ಲಿ ಅವರು ಆಡಿದ ಮಾತುಗಳು ಅಷ್ಟೊಂದು ಸೂಕ್ತವಲ್ಲ, ಬೇರೆ ರೀತಿಯಲ್ಲಿಯೇ ವಿವರಿಸಬಹುದಿತ್ತು, ಚಿರಂಜೀವಿ ಪ್ರಜ್ಞೆ ಕಳೆದುಕೊಂಡಿದ್ದಾರೆ ಎಂದೂ ನೆಟ್ಟಿಗರು ಪೋಸ್ಟ್ ಹಂಚಿಕೊಂಡು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಚಿರಂಜೀವಿ ಅವರು ಮುಂಬರುವ 'ವಿಶ್ವಂಭರ' ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರವು 2026ರಲ್ಲಿ ಬಿಡುಗಡೆಯಾಗಲಿದೆ.
.VIDEO | ಪಂಚಮಸಾಲಿ ಮೀಸಲಾತಿ ಹೋರಾಟ; ಪೊಲೀಸರ ವಶಕ್ಕೆ ಪ್ರತಿಭಟನಾಕಾರರು! .ಕಿಂಗ್ ಈಸ್ ಅಲೈವ್ ಅಂದಿದ್ಯಾಕೆ: ಕಾಂಗ್ರೆಸ್ನವರನ್ನು ಕುಟುಕಿದ ಅಶೋಕ್! .

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.