ವೆಲಿಂಗ್ಟನ್: ನ್ಯೂಜಿಲೆಂಡ್ ತಂಡ, ಎರಡನೇ ಟೆಸ್ಟ್ ಪಂದ್ಯದ ಮೊದಲ ದಿನವಾದ ಬುಧವಾರ ವೆಸ್ಟ್ ಇಂಡೀಸ್ ತಂಡವನ್ನು ಸಾಧಾರಣ ಮೊತ್ತಕ್ಕೆ ಉರುಳಿಸಿ ಮೇಲುಗೈ ಸಾಧಿಸಿತು. ಆದರೆ ವೇಗದ ಬೌಲರ್ ಬ್ಲೇರ್ ಟಿಕ್ನರ್ ಅವರನ್ನು ಭುಜದ ಗಂಭೀರ ಗಾಯದಿಂದಾಗಿ ಕ್ರೀಡಾಂಗಣದಿಂದ ಸ್ಟ್ರೆಚರ್ನಲ್ಲಿ ನಿರ್ಗಮಿಸಬೇಕಾಯಿತು.

ವೆಸ್ಟ್ ಇಂಡೀಸ್ ತಂಡ 75 ಓವರುಗಳಲ್ಲಿ 205 ರನ್ ಗಳಿಸಿತು. ನ್ಯೂಜಿಲೆಂಡ್ ವಿಕೆಟ್ ನಷ್ಟವಿಲ್ಲದೇ 24 ರನ್ ಗಳಿಸಿ ದಿನದಾಟ ಮುಗಿಸಿತು.

ಟಿಕ್ನರ್ 16 ಓವರ್ ಬೌಲ್ ಮಾಡಿ 32 ರನ್ಗಳಿಗೆ 4 ವಿಕೆಟ್ ಪಡೆದರು. ವೆಸ್ಟ್ ಇಂಡೀಸ್ ಕಳೆದುಕೊಂಡ ಮೊದಲ ಐದು ವಿಕೆಟ್ಗಳಲ್ಲಿ ನಾಲ್ಕು ಅವರ ಪಾಲಾಯಿತು.

ಆದರೆ ಅವರು ಅರ್ಧದಲ್ಲೇ ವಾಪಸಾಗಬೇಕಾಯಿತು. ಫೀಲ್ಡಿಂಗ್ ವೇಳೆ ಭುಜ ನೆಲಕ್ಕೆ ಬಡಿದು ಅವರು ನರಳಿದರು. ವೈದ್ಯಕೀಯ ಸಿಬ್ಬಂದಿ ಧಾವಿಸಿ ಅವರನ್ನು ಸ್ಟ್ರೆಚರ್ನಲ್ಲಿ ಕರೆದೊಯ್ದರು. ಕೂಡಲೇ ಆಂಬುಲೆನ್ಸ್ನಲ್ಲಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ‘ಅವರ ಎಡಭುಜಕ್ಕೆ ಗಾಯವಾಗಿದೆ’ ಎಂದು ಕ್ರಿಕೆಟ್ ನ್ಯೂಜಿಲೆಂಡ್ ತಿಳಿಸಿದೆ.

ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್: ವೆಸ್ಟ್ ಇಂಡೀಸ್: 75 ಓವರುಗಳಲ್ಲಿ 205 (ಜಾನ್ ಕ್ಯಾಂಬೆಲ್ 44, ಬ್ರಾಂಡನ್ ಕಿಂಗ್ 33, ಶಾಯಿ ಹೋಪ್ 48, ರೋಸ್ಟನ್ ಚೇಸ್ 29; ಮೈಕೆಲ್ ರೇ 67ಕ್ಕೆ3, ಬ್ಲೇರ್ ಟಿಕ್ನರ್ 32ಕ್ಕೆ4); ನ್ಯೂಜಿಲೆಂಡ್: ವಿಕೆಟ್ ನಷ್ಟವಿಲ್ಲದೇ 24 (ಟಾಮ್ ಲೇಥಮ್ ಔಟಾಗದೇ 7, ಡೆವಾನ್ ಕಾನ್ವೆ ಔಟಾಗದೇ 16).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.