ಬುಧವಾರ, 10 ಡಿಸೆಂಬರ್ 2025
×
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ | ಈ ರಾಶಿಯವರಿಗೆ ಇಂದಿನ ದಿನಚರಿಯಿಂದ ಆತ್ಮವಿಶ್ವಾಸ ಹೆಚ್ಚಲಿದೆ
Published 9 ಡಿಸೆಂಬರ್ 2025, 23:14 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಕಾಳಜಿ ಹೊಂದಿದವರ ಸಲಹೆಗಳಿಗೆ ಕಿವಿಗೊಡಿ, ಅದರಿಂದಾಗಿ ಅನುಕೂಲವಾಗುವುದು. ಆಕಾಶ ವೀಕ್ಷಣೆಯನ್ನು ನಿಯಮಬದ್ಧವಾಗಿ ಮಾಡುವವರಿಗೆ ಉತ್ತಮ ಜತೆಗಾರರೊಬ್ಬರು ದೊರೆಯಲಿದ್ದಾರೆ.
ವೃಷಭ
ಅಕ್ಕ ಪಕ್ಕದವರಲ್ಲಿ ಅನವಶ್ಯಕವಾಗಿ ಸಂಬಂಧವಿರದ ವಿಚಾರಕ್ಕೆ ಸಲಹೆ ಹೇಳಿದರೆ ನಿಷ್ಠುರವಾಗುವುದು ಖಚಿತ. ಮೃದು ಮಾತುಗಳಿಂದ ಸಮಸ್ಯೆಗಳು ಪರಿಹಾರವಾಗುವುದಿಲ್ಲ. ಮೀನು ಮಾರಾಟಗಾರರು ಲಾಭ ಪಡೆಯುವಿರಿ.
ಮಿಥುನ
ತಾಂತ್ರಿಕ ವಿದ್ಯಾರ್ಥಿಗಳು ವಿನೂತನ ಯೋಜನೆಯನ್ನು ಮಂಡಿಸುವಲ್ಲಿ ಯಶಸ್ವಿಯಾಗುವಿರಿ. ಅಕ್ಕ ತಂಗಿಯರ ಆಸೆ ಈಡೇರಿಸಲಿದ್ದೀರಿ. ಇಂದಿನ ದಿನಚರಿಯಿಂದ ಆತ್ಮವಿಶ್ವಾಸ ಹೆಚ್ಚಲಿದೆ.
ಕರ್ಕಾಟಕ
ಕರ್ತವ್ಯ ಕೊರತೆಯಿಂದ ಉಲ್ಲಾಸ ಕಳೆದುಕೊಳ್ಳುವ ಸಮಯ ಎದುರಾಗಲಿದೆ. ಕೃತಜ್ಞತೆಯನ್ನು ವ್ಯಕ್ತಪಡಿಸದ ವ್ಯಕ್ತಿಗಳ ಜೊತೆ ವ್ಯವಹಾರ ನಡೆಸುವುದು ಬೇಡ. ನಿವೇಶನ ಖರೀದಿಸುವ ಯೋಚನೆಗಳು ಬರಲಿವೆ.
ಸಿಂಹ
ಸಾಹಸಿ ಕಾರ್ಯವನ್ನು ಮಾಡುವ ಮನಸ್ಥಿತಿ ಹೊಂದಿದವರಿಗೆ ದಾಖಲೆಯನ್ನು ಸೃಷ್ಟಿಸುವ ಅವಕಾಶ ಸಿಗುವುದು. ವ್ಯವಹಾರದಲ್ಲಿ ಎದುರಾಗಿರುವ ಸಮಸ್ಯೆ ಬಗೆಹರಿಸಿಕೊಂಡು ಹೆಜ್ಜೆ ಹಾಕುವುದು ಉತ್ತಮ.
ಕನ್ಯಾ
ದೇವರ ಆಭರಣ ತಯಾರಿಕೆ ಅಥವಾ ದೇವಾಲಯದ ಕೆಲಸದ ಗುತ್ತಿಗೆದಾರರಿಗೆ ಹೊಸ ಗುತ್ತಿಗೆ ಸಿಗುವ ಸಂಭವಗಳಿವೆ. ತಿಳಿವಳಿಕೆಯ ಮಾತು ಒಬ್ಬರ ಜೀವನವನ್ನು ಉದ್ಧರಿಸುತ್ತದೆ. ಮಿತ್ರರಲ್ಲಿ ವರ್ತನೆ ಉತ್ತಮವಾಗಿರಲಿ.
ತುಲಾ
ಕೈಗೆತ್ತಿಕೊಂಡಿರುವ ಕೆಲಸಗಳು ಖರ್ಚಿಗೆ ಕಾರಣವಾದರೂ ಮುಂದಿನ ದಿನಗಳಲ್ಲಿ ಲಾಭದಾಯಕ. ಎಂಜಿನಿಯರ್‌ಗಳಿಗೆ ಬಿಡುವಿಲ್ಲದ ಗಡಿಬಿಡಿಯ ದಿನವಾಗಿ ಪರಿಣಮಿಸುತ್ತದೆ.
ವೃಶ್ಚಿಕ
ಪತ್ರಿಕಾ ವರದಿಗಾರರಿಗೆ ವಿಶೇಷ ದಿನವಾಗಿ ಸದಾಕಾಲ ನೆನಪಿರುವಂತೆ ಆಗಬಹುದು. ಕಾರ್ಯ ಕಲಾಪಗಳ ಒತ್ತಡದಲ್ಲಿಯು ಸ್ನೇಹಿತರ ವರ್ಗಕ್ಕೆ ಸಮಯ ನೀಡಬೇಕಾಗುತ್ತದೆ. ಮನೆಯಲ್ಲಿ ನೆಮ್ಮದಿ ಕಂಡುಬರಲಿದೆ.
ಧನು
ಈಗಿನ ಉದ್ಯೋಗವನ್ನು ಬಿಟ್ಟು ಹೊಸ ಸ್ವ ಉದ್ಯೋಗ ಒಂದನ್ನು ಶುರು ಮಾಡುವ ಯೋಜನೆಯನ್ನು ನಿರೂಪಿಸುವಿರಿ. ಮನೆಯಲ್ಲಿ ಮಾಡುವ ಅಡುಗೆ ಹೊರತುಪಡಿಸಿ ಬೇರೆಯ ಆಹಾರವನ್ನು ತಿನ್ನುವ ಮನಸ್ಸಾಗುತ್ತದೆ.
ಮಕರ
ನೀವೇ ವಿಮರ್ಶಿಸಿಕೊಂಡಲ್ಲಿ ನಡವಳಿಕೆಯಲ್ಲಿನ ತಪ್ಪುಗಳು ಅರಿವಾಗುವುದು. ಸಾಂಸಾರಿಕವಾಗಿ ಅಥವಾ ವೈಯಕ್ತಿಕವಾಗಿ ಕೆಲವು ಮುಖ್ಯವಾದ ನಿರ್ಧಾರಗಳನ್ನು ಕೈಗೊಳ್ಳುವಿರಿ. ಅಶ್ವತ್ಥ ವೃಕ್ಷಕ್ಕೆ ಪ್ರದಕ್ಷಿಣೆ ಹಾಕಿ.
ಕುಂಭ
ಕೆಲವು ಸಮಸ್ಯೆಗಳನ್ನು ವಯಸ್ಕರಲ್ಲಿಯೇ ಹೇಳುವುದಕ್ಕಿಂತ ಹಿರಿಯರಲ್ಲಿ ಹೇಳುವುದರಿಂದಾಗಿ ಸಮಾಧಾನವಾಗುವುದು. ತೋಟದ ಫಸಲಿನಲ್ಲಿ ಮಹತ್ತರ ಬದಲಾವಣೆ ತರುವ ಉಪಾಯ ಮಾಡುವಿರಿ.
ಮೀನ
ವೈಯಕ್ತಿಕ ಅಭಿವೃದ್ಧಿಗೂ ಸಾಮಾಜಿಕ ಏಳಿಗೆಗೂ ಅನುಕೂಲ ಆಗಲಿದೆ. ತಮ್ಮನ ಮಕ್ಕಳ ಮದುವೆಯಲ್ಲಿ ಓಡಾಟ ನಡೆಸುವಿರಿ. ಸಮಯ ಪ್ರಜ್ಞೆಯಿಂದ ಕಾರ್ಯ ನಿರ್ವಹಿಸಿ, ಗೆಲುವು ನಿಮ್ಮದಾಗುವುದು
ADVERTISEMENT
ADVERTISEMENT