ನಟ ದರ್ಶನ್ ಅಭಿನಯದ ಬಹುನಿರೀಕ್ಷಿತ ‘ದಿ ಡೆವಿಲ್’ ಸಿನಿಮಾ ಇಂದು (ಗುರುವಾರ) ಬಿಡುಗಡೆಯಾಗಿದೆ. ದರ್ಶನ್ರನ್ನು ಪರದೆ ಮೇಲೆ ನೋಡಲು ಕಾದು ಕುಳಿತಿದ್ದ ಅಭಿಮಾನಿಗಳು ಸಿನಿಮಾವನ್ನು ಅದ್ಧೂರಿಯಾಗಿ ಬರಮಾಡಿಕೊಂಡಿದ್ದಾರೆ. ಬಹುತೇಕ ಚಿತ್ರಮಂದಿರಗಳಲ್ಲಿ ಸಿನಿಮಾ ಬೆಳಿಗ್ಗೆ 6.30ಕ್ಕೆ ಪ್ರದರ್ಶನ ಆರಂಭಗೊಂಡಿವೆ.

‘ದಿ ಡಿವಿಲ್’ ಸಿನಿಮಾವನ್ನು ಕಣ್ಣು ತುಂಬಿಕೊಂಡ ದರ್ಶನ್ ಅಭಿಮಾನಿಗಳು ಸಂತಸ ವ್ಯಕ್ತಪಡಿಸುತ್ತಿದ್ದಾರೆ. ದರ್ಶನ್ ಲಿಸ್ಟ್ಗೆ ಮತ್ತೊಂದು ಹಿಟ್ ಸಿನಿಮಾ ಸೇರ್ಪಡೆಯಾಗಲಿದೆ ಎಂಬುದು ಅಭಿಮಾನಿಗಳ ಅಂಬೋಣ. ಅಂದಹಾಗೆ ದರ್ಶನ್ ಜೈಲಿನಲ್ಲಿರುವಾಗ ರಿಲೀಸ್ ಆಗಿರುವ ಎರಡನೇ ಚಿತ್ರ ಡೆವಿಲ್. ಇದಕ್ಕೂ ಮೊದಲು 2011ರಲ್ಲಿ ದರ್ಶನ್ ಜೈಲು ಸೇರಿದ್ದ ವೇಳೆ ‘ಸಾರಥಿ’ ಸಿನಿಮಾ ರಿಲೀಸ್ ಆಗಿ ಯಶಸ್ವಿಯಾಗಿತ್ತು.

ಜೈಲಿನಲ್ಲಿದ್ದುಕೊಂಡು ಸಿನಿಮಾ ರಿಲೀಸ್

ಸಿನಿಮಾ ಇತಿಹಾಸದಲ್ಲಿ ಯಾವುದೇ ಚಿತ್ರಗಳು ಪ್ರಮುಖ ನಟ ಜೈಲಿನಲ್ಲಿದ್ದಾಗ ಆತ ನಟಿಸಿದ ಸಿನಿಮಾಗಳು ರಿಲೀಸ್ ಆಗಿರುವ ಉದಾಹರಣೆಗಳಿಲ್ಲ. ಆದರೆ, ದರ್ಶನ್ ಎರಡು ಬಾರಿ ಜೈಲು ಸೇರಿದ್ದು, ಎರಡು ಬಾರಿಯೂ ಸಿನಿಮಾಗಳು ರಿಲೀಸ್ ಆಗಿವೆ. ಆ ಮೂಲಕ ಜೈಲಿನಲ್ಲಿದ್ದುಕೊಂಡು ಎರಡು ಸಿನಿಮಾ ರಿಲೀಸ್ ಕಂಡ ನಟ ಎಂಬ ದಾಖಲೆಯೊಂದು ದರ್ಶನ್ ಹೆಸರಿಗೆ ಸೇರ್ಪಡೆಯಾಯಿತು.
.VIDEO: ಮಗ ವಿನೀಶ್ ಜೊತೆ ‘ದಿ ಡೆವಿಲ್’ ಸಿನಿಮಾ ವೀಕ್ಷಿಸಿದ ವಿಜಯಲಕ್ಷ್ಮಿ.ಸಿನಿಮಾದ ಯಶಸ್ಸಿನ ಮೂಲಕ ಉತ್ತರಿಸೋಣ: 'ಡೆವಿಲ್' ರಿಲೀಸ್ಗೂ ಮುನ್ನ ದರ್ಶನ್ ಸಂದೇಶ.
ಡೆವಿಲ್ ಸಿನಿಮಾಗೆ ಪ್ರಕಾಶ್ ವೀರ್ ಅವರು ನಿರ್ದೇಶನ ಮಾಡಿದ್ದಾರೆ. ದರ್ಶನ್ಗೆ ನಾಯಕಿಯಾಗಿ ರಚನಾ ರೈ, ಶರ್ಮಿಳಾ ಮಾಂಡ್ರೆ, ಅಚ್ಯುತ್ ಕುಮಾರ್, ವಿನಯ್ ಗೌಡ, ಶೋಭರಾಜ್, ಗಿಲ್ಲಿ ನಟ ಸೇರಿದಂತೆ ಅನೇಕರು ನಟಿಸಿದ್ದಾರೆ.

ತಮ್ಮ ಸ್ನೇಹಿತೆಗೆ ಅಶ್ಲೀಲ ಸಂದೇಶ ಕಳುಹಿಸಿದ್ದ ಎಂಬ ಕಾರಣಕ್ಕೆ ಚಿತ್ರದುರ್ಗದ ರೇಣುಕಾಸ್ವಾಮಿ (35) ಎಂಬವರನ್ನು ಕೊಲೆ ಮಾಡಿದ್ದ ಆರೋಪದಡಿ ನಟ ದರ್ಶನ್ ತೂಗುದೀಪ (47), ಅವರ ಸ್ನೇಹಿತೆ ಪವಿತ್ರಾ ಗೌಡ ಸೇರಿ 13 ಮಂದಿ ಜೈಲು ಸೇರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.