ದಿನ ಭವಿಷ್ಯ | ಈ ರಾಶಿಯವರು ಮಗಳ ಮದುವೆ ಬಗ್ಗೆ ಯೋಚಿಸುವಿರಿ
Published 10 ಡಿಸೆಂಬರ್ 2025, 23:07 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಎಲ್ಲರೊಂದಿಗೆ ಬೆರೆಯುವ ಹಾಗೂ ಸಾಮಾಜಿಕ ಚಟುವಟಿಕೆಗಳಲ್ಲಿ ಭಾಗಿಯಾಗುವ ಸಂದರ್ಭ ಬರಲಿದೆ. ಮನೆಯ ಕಟ್ಟಡದ ದುರಸ್ತಿ ಕಾರ್ಯಗಳು ಅನಿವಾರ್ಯವಾಗುತ್ತದೆ. ಮಗಳ ಮದುವೆ ಬಗ್ಗೆ ಯೋಚಿಸುವಿರಿ.
ವೃಷಭ
ಹೊಸ ಮನೆಯ ಕೆಲಸಗಳು ಮುಗಿದು ಹಿರಿಯರ ಸಲಹೆಯಂತೆಯೇ ಗೃಹ ಪ್ರವೇಶದ ದಿನ ನಿಗದಿಗೊಳಿಸುವಿರಿ. ನಿಮ್ಮೆದುರಿಗಿರುವ ಸವಾಲನ್ನು ಎದುರಿಸುವ ಶಕ್ತಿ ಮತ್ತು ಸಾಮರ್ಥ್ಯ ಅಭಿವೃದ್ಧಿಯಾಗುವುದು.
ಮಿಥುನ
ಪರೋಪಕಾರ ಮತ್ತು ಪಾರಮಾರ್ಥಿಕ ವಿಷಯಗಳತ್ತ ಮನಸ್ಸು ಹರಿಯುವುದು. ನಿಮ್ಮಲ್ಲಿರುವ ಪಾರಮಾರ್ಥಿಕತೆಯಿಂದಾಗಿ ದೇವರ ರಕ್ಷಣೆ ಸದಾಕಾಲ ದೊರೆಯುವುದು. ಅಧಿಕಾರಕ್ಕಾಗಿ ಹೆಚ್ಚಿನ ಓಡಾಟ ನಡೆಸುವಿರಿ.
ಕರ್ಕಾಟಕ
ನಿಮ್ಮ ಕೋಪದ, ದಡ್ಡತನದ ತೀರ್ಮಾನದಿಂದ ಪಶ್ಚಾತ್ತಾಪ ಪಡುವ ಘಟನೆ ನಡೆಯುತ್ತದೆ. ನಿಮ್ಮ ಶ್ರಮದ ಫಲ ಏನು ಎಂಬುದು ಮಕ್ಕಳಿಗೆ ಅರಿವಾಗಲಿದೆ. ವಾತ ಸಂಬಂಧ ಅನಾರೋಗ್ಯಕ್ಕೆ ಔಷಧಿ ತೆಗೆದುಕೊಳ್ಳಿರಿ.
ಸಿಂಹ
ಕೆಲ ದಿನಗಳ ಹಿಂದೆ ನೀವು ತೆಗೆದುಕೊಂಡ ತೀರ್ಮಾನ ಸರಿಯೇ ಎಂಬುದರ ಬಗ್ಗೆ ಇಂದು ಆಲೋಚಿಸಿ ಮುಂದಿನ ತೀರ್ಮಾನ ತೆಗೆದುಕೊಳ್ಳ ಬೇಕಾಗುವುದು. ವರ್ಷದ ಖರ್ಚುವೆಚ್ಚಗಳಲ್ಲಿ ಸರಿಯಾದ ಲೆಕ್ಕಾಚಾರ ನಡೆಸಿ.
ಕನ್ಯಾ
ಹಲವು ಕಾಲದಿಂದ ನಿಂತು ಹೋಗಿದ್ದ ಕೆಲಸಗಳು ದೈವಾನುಗ್ರಹದಿಂದ ಆರಂಭವಾಯಿತೆಂದು ಸಂತೋಷ ಪಡುವಿರಿ. ಒಳಗೊಳಗೆ ಅಸೂಯೆ ಪಡುವಂತಹ ಸಂಬಂಧಿಗಳು ನಿಮ್ಮ ಸಾಧನೆಗೆ ಅಡ್ಡಿ ತಂದಾರು.
ತುಲಾ
ಬಹಳ ದಿನಗಳಿಂದ ವರ್ತಮಾನ ಕಾಲದಲ್ಲಿರುವ ಕೆಲಸವು ಶುಭ ಅಂತ್ಯ ನೋಡುತ್ತದೆ. ತಿಳಿಯದ ವಿಷಯಗಳ ಬಗ್ಗೆ ಸಹೋದರರ ಜೊತೆ ವಾದಿಸಬೇಡಿ. ಸೋದರ ಮಾವನ ಮನೆಯ ಕಾರ್ಯಕ್ರಮದಲ್ಲಿ ಭಾಗವಹಿಸುವಿರಿ.
ವೃಶ್ಚಿಕ
ನ್ಯಾಯವಾದಿಗಳಿಗೆ ಉತ್ತಮ ದಿನ, ಜಯ ಸಾಧಿಸುವ ಬಗ್ಗೆ ಉತ್ತಮ ಅಂಶ ಸಿಗಲಿದೆ. ಹಿರಿಯರನ್ನು ನೋಡಿಕೊಳ್ಳುವ ಕರ್ತವ್ಯದಿಂದ ತಪ್ಪಿಸಿಕೊಳ್ಳ ಬೇಡಿ. ಇಲ್ಲ ಸಲ್ಲದ ವಿಷಯಗಳಲ್ಲಿ ತಲೆ ಹಾಕಲು ಹೋಗದಿರುವುದು ಕ್ಷೇಮ.
ಧನು
ಸಾಂಕ್ರಾಮಿಕ ರೊಗಗಳಿಂದ ನಿಮ್ಮ ಅಧ್ಯಯನಕ್ಕೆ ತೊಂದರೆ ಉಂಟಾಗಬಹುದು. ಹಿರಿಯರ ಮಾತಿನಂತೆ ನಡೆದುಕೊಳ್ಳುವ ನಿರ್ಧಾರ ಶುಭಪ್ರದವಾಗುತ್ತದೆ. ಪರಿಸ್ಥಿತಿಗೆ ಹೊಂದಿಕೊಳ್ಳುವ ಸ್ವಭಾವವು ನಿಮ್ಮಲ್ಲಿ ಬರಲಿದೆ.
ಮಕರ
ನಿಮಗೆ ಉಪಕಾರ ಮಾಡುವವರೆಲ್ಲರೂ ನಿಮ್ಮ ಹಿತಚಿಂತಕರೆಂದು ತಿಳಿಯಬೇಡಿ ಏಕೆಂದರೆ ನಯವಂಚಕರು ಸಹ ಆಗಬಹುದು. ತಂದೆಯಾಗುವ ಸುದ್ದಿ ಕೇಳಿ ಸಂತೋಷವನ್ನು ಎಲ್ಲರೊಂದಿಗೆ ಹಂಚಿಕೊಳ್ಳುವಂತಾಗುವುದು.
ಕುಂಭ
ಸಮಯ ಕಳೆಯಲು ಮಾಡಿದ ಕೆಲಸದಿಂದ ನಿಮ್ಮ ಸೃಜನಶೀಲತೆ ಹಾಗೂ ಚಾಣಾಕ್ಷತನ ಹೆಚ್ಚಲಿದೆ. ಬರುವ ಸಂಬಂಧಿಗಳು ನಿಮ್ಮ ಆತಿಥ್ಯದಿಂದ ಸಂತುಷ್ಟರಾಗುವರು. ವಾಸ್ತು ಶಿಲ್ಪದ ವಿದ್ಯಾರ್ಥಿಗಳಿಗೆ ಉತ್ತಮ ಬೇಡಿಕೆ.
ಮೀನ
ಈ ದಿನ ಯಾವುದೇ ತೀರ್ಪು ನೀಡುವುದು ಅಥವಾ ಇನ್ನೊಬ್ಬರನ್ನು ಪರೀಕ್ಷಿಸುವ ಕೆಲಸವು ನಿಮಗೆ ಸರಿಯಲ್ಲ. ಜಗದ್ಗುರುವಿನ ಸೇವೆಯಿಂದ ಪುಣ್ಯ ಪ್ರಾಪ್ತಿಯಾಗುವುದರ ಜೊತೆಗೆ ನಿಮ್ಮ ಭವಿಷ್ಯಕ್ಕೆ ಸರಿ ಮಾರ್ಗ ಸಿಗುತ್ತದೆ.