ಮೆಲ್ಬರ್ನ್: ಮುಂಬರುವ 19 ವರ್ಷದೊಳಗಿನವರ ವಿಶ್ವಕಪ್ ಟೂರ್ನಿಗಾಗಿ 15 ಸದಸ್ಯರನ್ನೊಳಗೊಂಡ ಆಸ್ಟ್ರೇಲಿಯಾ ಕ್ರಿಕೆಟ್ ತಂಡವನ್ನು ಘೋಷಣೆ ಮಾಡಲಾಗಿದೆ. ಇದರಲ್ಲಿ ಇಬ್ಬರು ಭಾರತೀಯ ಮೂಲದವರು ಸ್ಥಾನ ಪಡೆದಿದ್ದಾರೆ.

ಜನವರಿ 15 ರಿಂದ ಫೆಬ್ರವರಿ 6ರವರೆಗೆ ಜಿಂಬಾಂಬ್ವೆ ಹಾಗೂ ನಮೀಬಿಯಾದಲ್ಲಿ ನಡೆಯಲಿದ್ದು, ಆಸ್ಟ್ರೇಲಿಯಾ ತಂಡ ಪ್ರಕಟಿಸಿರುವ 15 ಮಂದಿ ಆಟಗಾರರಲ್ಲಿ ಇಬ್ಬರು ಭಾರತದ ಮೂಲದ ಆಟಗಾರರಾದ ಆರ್ಯನ್ ಶರ್ಮಾ ಮತ್ತು ಜಾನ್ ಜೇಮ್ಸ್ ಸ್ಥಾನ ಪಡೆದಿದ್ದಾರೆ.

ಉತ್ತಮ ಬ್ಯಾಟರ್ ಹಾಗೂ ಎಡಗೈ ಸ್ಪಿನ್ನರ್ ಆಗಿರುವ ಆರ್ಯನ್ ಹಾಗೂ ವೇಗದ ಆಲ್ರೌಂಡರ್ ಜೇಮ್ಸ್ ಇಬ್ಬರೂ ಕೂಡ ಸೆಪ್ಟೆಂಬರ್ ತಿಂಗಳಿನಲ್ಲಿ ಭಾರತ ವಿರುದ್ಧ ನಡೆದ ಯೂತ್ ಟೆಸ್ಟ್ ಮತ್ತು ಏಕದಿನ ಪಂದ್ಯಗಳಲ್ಲಿ ಆಸ್ಟ್ರೇಲಿಯಾ ಪರ ಆಡಿದ್ದರು.

ಇಬ್ಬರು ಭಾರತದ ಮೂಲದವರನ್ನು ಹೊರತುಪಡಿಸಿ, ಶ್ರೀಲಂಕಾದ ಇಬ್ಬರು ಆಟಗಾರರು, ನಾಡೆನ್ ಕೂರೆ ಮತ್ತು ನಿತೇಶ್ ಸ್ಯಾಮ್ಯುಯೆಲ್ ಹಾಗೂ ಚೀನಾ ಮೂಲದ ಅಲೆಕ್ಸ್ ಲೀ ಯಂಗ್ ಸ್ಥಾನ ಪಡೆದಿದ್ದಾರೆ. ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ತಂಡಕ್ಕೆ ಆಲಿವರ್ ಪೀಕ್ ನಾಯಕರಾಗಿದ್ದಾರೆ.
.ಅಂಡರ್-19 ಏಷ್ಯಾ ಕಪ್: ಸಿಎಸ್ಕೆ ಆರಂಭಿಕನಿಗೆ ನಾಯಕತ್ವ, ವೈಭವ್ಗೆ ಸ್ಥಾನ.ಅಂಡರ್ 19 ವಿಶ್ವಕಪ್: ಹೈವೋಲ್ಟೇಜ್ ಭಾರತ–ಪಾಕಿಸ್ತಾನ ಮುಖಾಮುಖಿಗೆ ಬ್ರೇಕ್.
ಆಸ್ಟ್ರೇಲಿಯಾ ತಂಡ ಐರ್ಲೆಂಡ್, ಜಪಾನ್ ಮತ್ತು ಶ್ರೀಲಂಕಾ ತಂಡಗಳೊಂದಿಗೆ 'ಎ' ಗುಂಪಿನಲ್ಲಿ ಸ್ಥಾನ ಪಡೆದಿದೆ.

ಆಸ್ಟ್ರೇಲಿಯಾ U19 ಪುರುಷರ ತಂಡ: ಆಲಿವರ್ ಪೀಕ್, ಕೇಸಿ ಬಾರ್ಟನ್, ನಾಡೆನ್ ಕೂರೆ, ಜೇಡೆನ್ ಡ್ರೇಪರ್, ಬೆನ್ ಗಾರ್ಡನ್, ಸ್ಟೀವನ್ ಹೊಗನ್, ಥಾಮಸ್ ಹೊಗನ್, ಜಾನ್ ಜೇಮ್ಸ್, ಚಾರ್ಲ್ಸ್ ಲ್ಯಾಚ್ಮಂಡ್, ವಿಲ್ ಮಲಾಜ್ಜುಕ್, ನಿತೇಶ್ ಸ್ಯಾಮ್ಯುಯೆಲ್, ಹೇಡನ್ ಶಿಲ್ಲರ್, ಆರ್ಯನ್ ಶರ್ಮಾ, ವಿಲಿಯಂ ಟೇಲರ್, ಅಲೆಕ್ಸ್ ಲೀ ಯಂಗ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.