ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಳಂಬಿತ ಅಥವಾ ಪರಿಷ್ಕೃತ ಐ.ಟಿ. ರಿಟರ್ನ್ಸ್‌: 31ರವರೆಗೆ ಗಡುವು ವಿಸ್ತರಣೆ

Last Updated 1 ಮೇ 2021, 11:24 IST
ಅಕ್ಷರ ಗಾತ್ರ

ನವದೆಹಲಿ: 2019–20ನೇ ಹಣಕಾಸು ವರ್ಷಕ್ಕೆ ವಿಳಂಬಿತ ಅಥವಾ ಪರಿಷ್ಕೃತ ಐಟಿಆರ್‌ ಸಲ್ಲಿಕೆಯೂ ಸೇರಿದಂತೆ ವಿವಿಧ ಆದಾಯ ತೆರಿಗೆ ವಿವರಗಳ ಸಲ್ಲಿಕೆಗೆ ನೀಡಿದ್ದ ಗಡುವನ್ನು ಮೇ 31ರವರೆಗೆ ವಿಸ್ತರಿಸಲಾಗಿದೆ.

ಕೋವಿಡ್‌–19 ಸಾಂಕ್ರಾಮಿಕದಿಂದ ಎದುರಾಗಿರುವ ಪರಿಸ್ಥಿತಿಯನ್ನು ಗಮನದಲ್ಲಿ ಇಟ್ಟುಕೊಂಡು ಹಾಗೂ ಹಲವು ತೆರಿಗೆದಾರು, ತೆರಿಗೆ ಸಲಹೆಗಾರರು ಸಲ್ಲಿಸಿರುವ ಮನವಿಗಳನ್ನು ಪರಿಗಣಿಸಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸರ್ಕಾರದ ಅಧಿಕೃತ ಪ್ರಕಟಣೆ ತಿಳಿಸಿದೆ.

ವಿಳಂಬಿತ ಅಥವಾ ಪರಿಷ್ಕೃತ ರಿಟರ್ನ್ಸ್‌ ಅನ್ನು ಮಾರ್ಚ್ 31ರ ಒಳಗಾಗಿ ಸಲ್ಲಿಸಬೇಕಿತ್ತು. ಹೊಸ ಆದೇಶದಂತೆ ಮೇ 31ರ ಒಳಗಾಗಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 148ರ ಅಡಿಯಲ್ಲಿ ನೊಟೀಸ್‌ಗೆ ಪ್ರತಿಕ್ರಿಯೆಯಾಗಿ ಆದಾಯದ ರಿಟರ್ನ್ ಸಲ್ಲಿಸುವ ಕೊನೆಯ ದಿನಾಂಕ 2021 ಏಪ್ರಿಲ್ 1 ಆಗಿತ್ತು. ಅದನ್ನು ಮೇ 31ರವರೆಗೆ ವಿಸ್ತರಿಸಲಾಗಿದೆ. ವ್ಯಾಜ್ಯ ಪರಿಹಾರ ಸಮಿತಿಗೆ ಆಕ್ಷೇಪಣೆಗಳನ್ನು ಸಲ್ಲಿಸಲು ಹಾಗೂ ಆಯುಕ್ತರಿಗೆ ಮೇಲ್ಮನವಿ ಸಲ್ಲಿಸಲು ಮೇ 31ರವರೆಗೆ ಅವಕಾಶ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT