ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಜರಾತ್‌ನಲ್ಲಿ ಟೆಸ್ಲಾ ಕಾರು ಘಟಕ ಸ್ಥಾಪನೆ

Published 29 ಡಿಸೆಂಬರ್ 2023, 15:42 IST
Last Updated 29 ಡಿಸೆಂಬರ್ 2023, 15:42 IST
ಅಕ್ಷರ ಗಾತ್ರ

ಅಹಮದಾಬಾದ್‌: ಉದ್ಯಮಿ ಇಲಾನ್‌ ಮಸ್ಕ್‌ ಒಡೆತನದ ಟೆಸ್ಲಾ ಕಂಪನಿಯು ಭಾರತದಲ್ಲಿ ತನ್ನ ಪ್ರಥಮ ಕಾರು ಉತ್ಪಾದನಾ ಘಟಕವನ್ನು ಗುಜರಾತ್‌ನಲ್ಲಿ ಆರಂಭಿಸಲಿದೆ ಎಂದು ಗುಜರಾತ್‌ ಸರ್ಕಾರ ತಿಳಿಸಿದೆ.

ಜನವರಿ 10 ಮತ್ತು 12ರಂದು ಗುಜರಾತ್‌ನ ಗಾಂಧಿನಗರದಲ್ಲಿ ‘ವೈಬ್ರೆಂಟ್‌ ಗುಜರಾತ್‌’ ಕಾರ್ಯಕ್ರಮ ಆಯೋಜಿಸಲಾಗಿದೆ. ಇದರಲ್ಲಿ ಮಸ್ಕ್‌ ಕೂಡ ಭಾಗವಹಿಸಲಿದ್ದು, ಅಂದೇ ಅಧಿಕೃತವಾಗಿ ಘೋಷಿಸಲಿದ್ದಾರೆ ಎಂದು ಹೇಳಲಾಗಿದೆ.

ಕಂಪನಿಯು ಕಳೆದ ಜನವರಿಯಲ್ಲಿ ಟೆಸ್ಲಾ ಇಂಡಿಯಾ ಮೋಟಾರ್‌ ಆ್ಯಂಡ್‌ ಎನರ್ಜಿ ಹೆಸರಿನಡಿ ಬೆಂಗಳೂರಿನಲ್ಲಿ ನೋಂದಾಯಿಸಿತ್ತು. ಅಲ್ಲದೇ, ಘಟಕ ಸ್ಥಾ‍ಪನೆ ಸಂಬಂಧ ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಸಮೀಕ್ಷೆಯನ್ನೂ ನಡೆಸಿತ್ತು. 

‘ಮಸ್ಕ್‌ ಅವರು ಕಾರು ತಯಾರಿಕಾ ಘಟಕ ಸ್ಥಾಪನೆ ದೇಶದ ಹಲವೆಡೆ ಸಮೀಕ್ಷೆ ನಡೆಸಿದ್ದಾರೆ. ಗುಜರಾತ್‌ನಲ್ಲಿ ಭಾರತದ ಮೊದಲ ಘಟಕ ಸ್ಥಾಪಿಸುವ ಇರಾದೆ ಅವರ ಮನಸ್ಸಿನಲ್ಲಿದೆ. ಶೀಘ್ರವೇ, ಈ ಬಗ್ಗೆ ಅಧಿಕೃತವಾಗಿ ಘೋಷಿಸಲಾಗುವುದು’ ಎಂದು ಆರೋಗ್ಯ ಸಚಿವ ಹಾಗೂ ಸರ್ಕಾರದ ವಕ್ತಾರ ಋಷಿಕೇಶ ‍ಪಟೇಲ್‌ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಕಾರು ಘಟಕ ಸ್ಥಾಪನೆ ಸಂಬಂಧ ಗುಜರಾತ್‌ ಸರ್ಕಾರವು ಟೆಸ್ಲಾ ಕಂಪನಿಯ ಸಿಇಒ ಜತೆಗೆ ಹಲವು ತಿಂಗಳಿನಿಂದ ಮಾತುಕತೆ ನಡೆಸಿತ್ತು. ಘಟಕ ಸ್ಥಾಪನೆಗೆ ಪೂರಕವಾದ ವಾತಾವರಣ ಕಲ್ಪಿಸುವ ಬಗ್ಗೆ ಭರವಸೆ ನೀಡಿತ್ತು. 

ಈಗಾಗಲೇ, ಗುಜರಾತ್‌ನಲ್ಲಿ ಮಾರುತಿ ಸುಜುಕಿ, ಟಾಟಾ ಮೋಟಾರ್ಸ್‌ ವಾಹನಗಳ ತಯಾರಿಕಾ ಘಟಕಗಳಿವೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT