ಬುಧವಾರ, 21 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟ್ರಕ್‌ ಚಾಲಕರಿಗೆ ಎ.ಸಿ ಕ್ಯಾಬಿನ್‌ ಕಡ್ಡಾಯ

Published 10 ಡಿಸೆಂಬರ್ 2023, 15:55 IST
Last Updated 10 ಡಿಸೆಂಬರ್ 2023, 15:55 IST
ಅಕ್ಷರ ಗಾತ್ರ

ನವದೆಹಲಿ: ದೇಶದಲ್ಲಿ 2025ರ ಅಕ್ಟೋಬರ್‌ 1ರಿಂದ ತಯಾರಾಗುವ ಎಲ್ಲ ಟ್ರಕ್‌ಗಳ ಚಾಲಕರ ಕ್ಯಾಬಿನ್‌ ಕಡ್ಡಾಯವಾಗಿ ಹವಾ ನಿಯಂತ್ರಿತ ಆಗಿರಬೇಕು ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯವು ಅಧಿಸೂಚನೆ ಹೊರಡಿಸಿದೆ.

ಚಾಲಕರು ಅತಿಯಾದ ತಾಪಮಾನದಲ್ಲಿ ಟ್ರಕ್‌ಗಳನ್ನು ಚಲಾಯಿಸುತ್ತಾರೆ. ಹಾಗಾಗಿ, ಅವರ ಆರೋಗ್ಯ ಹಾಗೂ ಸುರಕ್ಷತೆ ದೃಷ್ಟಿಯಿಂದ ಸಚಿವಾಲಯವು ಈ ನಿರ್ಧಾರ ಕೈಗೊಂಡಿದೆ. 

3.5 ಟನ್‌ನಿಂದ 12 ಟನ್‌ನಷ್ಟು ಸರಕು ಸಾಗಣೆ ಮಾಡುವ ವಾಹನಗಳು (ಎನ್‌2) ಹಾಗೂ 12 ಟನ್‌ಗೂ ಹೆಚ್ಚು ಸರಕು ಸಾಗಣೆ ಮಾಡುವ ವಾಹನಗಳಿಗೆ (ಎನ್‌3) ಈ ನಿಯಮ ಅನ್ವಯಿಸಲಿದೆ ಎಂದು ಅಧಿಸೂಚನೆಯಲ್ಲಿ ಹೇಳಲಾಗಿದೆ.

ಹವಾನಿಯಂತ್ರಣ ವ್ಯವಸ್ಥೆಯೊಂದಿಗೆ ಅಳವಡಿಸುವ ಕ್ಯಾಬಿನ್‌ನ ಕಾರ್ಯಕ್ಷಮತೆ ಪರೀಕ್ಷೆಯು ಸಚಿವಾಲಯವು ಕಾಲಕಾಲಕ್ಕೆ ತಿದ್ದುಪಡಿ ಮಾಡಿದ (ಐಎಸ್‌ 14618:2022) ಪ್ರಕಾರವೇ ಇರಬೇಕು ಎಂದು ಸ್ಪಷ್ಟಪಡಿಸಿದೆ.

ಈ ವ್ಯವಸ್ಥೆ ಜಾರಿಗೊಳಿಸುವುದಕ್ಕೆ ಸಂಬಂಧಿಸಿದ ಕರಡು ಅಧಿಸೂಚನೆಗೆ ಜುಲೈನಲ್ಲಿ ಕೇಂದ್ರ ಸಾರಿಗೆ ಸಚಿವ ನಿತಿನ್‌ ಗಡ್ಕರಿ ಒಪ್ಪಿಗೆ ನೀಡಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT