ಗುರುವಾರ , ಮೇ 13, 2021
40 °C

ದೇಶದಲ್ಲಿ ಲಾಕ್‌ಡೌನ್‌ ಇಲ್ಲ: ವಿಶ್ವ ಬ್ಯಾಂಕ್ ಸಭೆಯಲ್ಲಿ ನಿರ್ಮಲಾ ಸ್ಪಷ್ಟನೆ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ದೇಶದಲ್ಲಿ ಕೋವಿಡ್–19 ಪ್ರಕರಣಗಳು ಹೆಚ್ಚಳ ಆಗುತ್ತಿದ್ದರೂ ಕೇಂದ್ರ ಸರ್ಕಾರವು ದೊಡ್ಡ ಪ್ರಮಾಣದಲ್ಲಿ ಲಾಕ್‌ಡೌನ್‌ ಜಾರಿಗೊಳಿಸುವುದಿಲ್ಲ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸ್ಪಷ್ಟಪಡಿಸಿದ್ದಾರೆ. ಲಾಕ್‌ಡೌನ್‌ ಬದಲಿಗೆ, ಸ್ಥಳೀಯ ಮಟ್ಟದಲ್ಲಿ ಕಂಟೈನ್‌ಮೆಂಟ್‌ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ಅವರು ಹೇಳಿದ್ದಾರೆ.

ವಿಶ್ವ ಬ್ಯಾಂಕ್‌ ಪ್ರಮುಖರ ಜೊತೆ ಮಂಗಳವಾರ ನಡೆದ ವರ್ಚುವಲ್‌ ಸಭೆಯಲ್ಲಿ ನಿರ್ಮಲಾ ಅವರು ಈ ವಿಚಾರ ತಿಳಿಸಿದ್ದಾರೆ. ‘ಎರಡನೆಯ ಅಲೆ ಶುರುವಾಗಿದ್ದರೂ, ನಾವು ದೊಡ್ಡ ಪ್ರಮಾಣದಲ್ಲಿ ಲಾಕ್‌ಡೌನ್‌ ಜಾರಿಗೆ ತರಬಾರದು ಎಂಬ ಸ್ಪಷ್ಟ ನಿಲುವು ಹೊಂದಿದ್ದೇವೆ. ಕೊರೊನಾ ಸೋಂಕಿಗೆ ತುತ್ತಾದವರನ್ನು ಸ್ಥಳೀಯವಾಗಿ ಪ್ರತ್ಯೇಕವಾಸಕ್ಕೆ ಒಳಪಡಿಸುವ ಕ್ರಮದ ಮೂಲಕ ಎರಡನೆಯ ಅಲೆಯನ್ನು ಎದುರಿಸಲಾಗುವುದು. ಲಾಕ್‌ಡೌನ್‌ ಖಂಡಿತ ಇರುವುದಿಲ್ಲ’ ಎಂದು ನಿರ್ಮಲಾ ಹೇಳಿದ್ದಾರೆ.

ಓದಿ: 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು