ಯಾವ ತೆರಿಗೆದಾರರು ಅರ್ಹ?
ಪ್ರಸಕ್ತ ವರ್ಷದ ಜುಲೈ 22ಕ್ಕೂ ಮುಂಚೆ ಬಾಕಿ ಉಳಿದಿರುವ ಮೇಲ್ಮನವಿ ಪ್ರಕರಣಗಳಿಗೆ ಈ ಯೋಜನೆ ಅನ್ವಯವಾಗಲಿದೆ. ಸುಪ್ರೀಂ ಕೋರ್ಟ್ ಹೈಕೋರ್ಟ್ ಆದಾಯ ತೆರಿಗೆ ಮೇಲ್ಮನವಿ ನ್ಯಾಯಮಂಡಳಿ ಆಯುಕ್ತರು ಮತ್ತು ಜಂಟಿ ಆಯುಕ್ತರಿಗೆ ಸಲ್ಲಿಸಿರುವ ಮೇಲ್ಮನವಿ ವಿಶೇಷ ಮೇಲ್ಮನವಿಗಳನ್ನು ಇದರಡಿ ಇತ್ಯರ್ಥ ಪಡಿಸಿಕೊಳ್ಳಲು ಅವಕಾಶವಿದೆ. 2021–22ನೇ ಸಾಲಿನ ಬಜೆಟ್‌ನಲ್ಲಿ ವಿವಾದ ಪರಿಹಾರ ಸಮಿತಿಯನ್ನು (ಡಿಆರ್‌ಸಿ) ಘೋಷಿಸಲಾಗಿತ್ತು. ಇದರ ಮುಂದೆ ಬಾಕಿ ಇರುವ ಪ್ರಕರಣಗಳು ಮತ್ತು ಆದಾಯ ತೆರಿಗೆ ಆಯುಕ್ತರಿಗೆ ಸಲ್ಲಿಸಿರುವ ಪರಿಷ್ಕೃತ ಅರ್ಜಿಗಳಿಗೆ ಯೋಜನೆಯು ಅನ್ವಯವಾಗಲಿದೆ.