ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನವದೆಹಲಿ: ಅಧಿಕೃತ ದಾಖಲೆಗಳಿಂದ 16,527 ಕಂಪನಿಗಳು ಹೊರಗೆ

Last Updated 27 ಜುಲೈ 2021, 4:15 IST
ಅಕ್ಷರ ಗಾತ್ರ

ನವದೆಹಲಿ: 2020ರ ಏಪ್ರಿಲ್‌ನಿಂದ 2021ರ ಜೂನ್ ಅವಧಿಯಲ್ಲಿ ಒಟ್ಟು 16,527 ಕಂಪನಿಗಳನ್ನು ಅಧಿಕೃತ ದಾಖಲೆಗಳಿಂದ ಹೊರಗಿಡಲಾಗಿದೆ ಎಂದು ಕಾರ್ಪೊರೇಟ್ ವ್ಯವಹಾರಗಳ ಖಾತೆ ರಾಜ್ಯ ಸಚಿವ ರಾವ್ ಇಂದ್ರಜಿತ್ ಸಿಂಗ್‌ ಅವರು ಲೋಕಸಭೆಗೆ ಮಾಹಿತಿ ನೀಡಿದ್ದಾರೆ.

ಕಂಪನಿ ಕಾಯ್ದೆ 2013ರ ಸೆಕ್ಷನ್‌ 248ರ ಅಡಿಯಲ್ಲಿ ಕೆಲವು ಷರತ್ತುಗಳಿಗೆ ಒಳಪಟ್ಟು ಕಂಪನಿಯನ್ನು ಅಧಿಕೃತ ದಾಖಲೆಗಳಿಂದ ಹೊರಹಾಕಬಹುದು. ಸತತ ಎರಡು ಹಣಕಾಸು ವರ್ಷಗಳಲ್ಲಿ ಯಾವುದೇ ವಹಿವಾಟು ನಡೆಸದೇ ಇದ್ದರೆ ಮತ್ತು ಈ ಅವಧಿಯಲ್ಲಿ ಕಾರ್ಯಾಚರಣೆ ನಡೆಸದೇ ಇರುವ ಸ್ಥಿತಿಯ ಕುರಿತು ಅರ್ಜಿ ಸಲ್ಲಿಸದೇ ಇದ್ದರೆ ಆ ಕಂಪನಿಯನ್ನು ಅಧಿಕೃತ ದಾಖಲೆಗಳಿಂದ ಹೊರಗಿಡಬಹುದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT