ಅನಗತ್ಯ ದಾಖಲೆ ಬರೆದ ಅರ್ಷದೀಪ್
ಇನಿಂಗ್ಸ್‌ನ 11ನೇ ಓವರ್ ಬೌಲಿಂಗ್ ಮಾಡಿದ ಅರ್ಷದೀಪ್, 7 ವೈಡ್‌ಗಳನ್ನು ಎಸೆದರು. ಆ ಮೂಲಕ, ಈ ಮಾದರಿಯಲ್ಲಿ ಒಂದೇ ಓವರ್‌ನಲ್ಲಿ ಅತಿಹೆಚ್ಚು ವೈಡ್ ಹಾಕಿದ ಆಟಗಾರ ಎನಿಸಿದರು. ಅಷ್ಟೇ ಅಲ್ಲ, ಓವರ್‌ವೊಂದರಲ್ಲಿ ಹೆಚ್ಚು (13) ಎಸೆತಗಳನ್ನು ಹಾಕಿದ ಬೌಲರ್ ಎಂಬ ದಾಖಲೆಯನ್ನು ಅಫ್ಗಾನಿಸ್ತಾನದ ನವೀನ್ ಉಲ್ ಹಕ್ ಅವರೊಂದಿಗೆ ಹಂಚಿಕೊಂಡರು. 2024ರಲ್ಲಿ ಜಿಂಬಾಬ್ವೆ ವಿರುದ್ಧ ನಡೆದ ಪಂದ್ಯದಲ್ಲಿ ನವೀನ್ ಅವರೂ 13 ಎಸೆತ ಹಾಕಿದ್ದರು.