ಮುಲ್ಲನಪುರ: ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಕ್ರಿಕೆಟ್ ಟೂರ್ನಿಯ ಎರಡನೇ ಪಂದ್ಯದ ವೇಳೆ ಅನುಭವಿ ವೇಗಿ ಅರ್ಷದೀಪ್ ಸಿಂಗ್ ಅವರು ಅನಗತ್ಯ ದಾಖಲೆಯೊಂದನ್ನು ತಮ್ಮ ಹೆಸರಿಗೆ ಬರೆದುಕೊಂಡರು.

ಇನಿಂಗ್ಸ್ನ 11ನೇ ಓವರ್ನಲ್ಲಿ ಬೌಲಿಂಗ್ ಮಾಡಿದ ಅವರು ಬರೋಬ್ಬರಿ 7 ವೈಡ್ಗಳನ್ನು ಎಸೆದರು. ಇದರೊಂದಿಗೆ, ಈ ಮಾದರಿಯಲ್ಲಿ ಒಂದೇ ಓವರ್ನಲ್ಲಿ ಅತಿಹೆಚ್ಚು ವೈಡ್ ಹಾಕಿದ ಆಟಗಾರ ಎನಿಸಿದರು. ಅಷ್ಟೇ ಅಲ್ಲ, ಓವರ್ವೊಂದರಲ್ಲಿ ಹೆಚ್ಚು (13) ಎಸೆತಗಳನ್ನು ಹಾಕಿದ ಬೌಲರ್ ಎಂಬ ದಾಖಲೆಯನ್ನು ಅಫ್ಗಾನಿಸ್ತಾನದ ನವೀನ್ ಉಲ್ ಹಕ್ ಅವರೊಂದಿಗೆ ಹಂಚಿಕೊಂಡರು.

2024ರಲ್ಲಿ ಜಿಂಬಾಬ್ವೆ ವಿರುದ್ಧ ನಡೆದ ಪಂದ್ಯದಲ್ಲಿ ನವೀನ್ ಅವರೂ 13 ಎಸೆತ ಹಾಕಿದ್ದರು. ದಕ್ಷಿಣ ಆಫ್ರಿಕಾದ ಸಿಸಂಡ ಮಗಲ ಎರಡನೇ ಸ್ಥಾನದಲ್ಲಿದ್ದಾರೆ. ಅವರು, ಪಾಕಿಸ್ತಾನ ವಿರುದ್ಧ 2021ರಲ್ಲಿ 12 ಎಸೆತಗಳನ್ನು ಹಾಕಿದ್ದರು.

ಬೃಹತ್ ಮೊತ್ತದತ್ತ ಹರಿಣಗಳು

ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದಿರುವ ಆಫ್ರಿಕಾ ಪಡೆ 14 ಓವರ್ಗಳಲ್ಲಿ 2 ವಿಕೆಟ್ ನಷ್ಟಕ್ಕೆ 147 ರನ್ ಗಳಿಸಿದೆ.

ಕ್ವಿಂಟನ್ ಡಿ ಕಾಕ್ ಜೊತೆ ಇನಿಂಗ್ಸ್ ಆರಂಭಿಸಿದ ರೀಜಾ ಹೆಂಡ್ರಿಕ್ಸ್ 8 ರನ್ ಗಳಿಸಿದ್ದಾಗ ವಿಕೆಟ್ ಒಪ್ಪಿಸಿದ್ದಾರೆ. ಬಳಿಕ ಬಂದ ನಾಯಕ ಏಡನ್ ಮರ್ಕ್ರಂ, 29 ರನ್ ಗಳಿಸಿ ಔಟಾಗಿದ್ದಾರೆ. ಎರಡೂ ವಿಕೆಟ್ಗಳು ವರುಣ್ ಚಕ್ರವರ್ತಿ ಪಾಲಾಗಿವೆ.

ಸದ್ಯ ಡಿ ಕಾಕ್ ಮತ್ತು ಡೆವಾಲ್ಡ್ ಬ್ರೆವಿಸ್ ಕ್ರೀಸ್ನಲ್ಲಿದ್ದಾರೆ.

ಬಿರುಸಿನ ಬ್ಯಾಟಿಂಗ್ ಮಾಡುತ್ತಿರುವ ಡಿ ಕಾಕ್, ಕೇವಲ 43 ಎಸೆತಗಳಲ್ಲಿ 7 ಸಿಕ್ಸರ್, 5 ಬೌಂಡರಿ ಸಹಿತ 88 ರನ್ ಗಳಿಸಿದ್ದಾರೆ. ಹೀಗಾಗಿ, ಹರಿಣಗಳು ಬೃಹತ್ ಮೊತ್ತ ಕಲೆಹಾಕುವ ಸಾಧ್ಯತೆ ಇದೆ.
.IND vs SA: ಡಿ ಕಾಕ್ ಬೀಸಾಟ; ಭಾರತದ ಎದುರು ಉತ್ತಮ ಮೊತ್ತದತ್ತ ದಕ್ಷಿಣ ಆಫ್ರಿಕಾ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.