ಮುಲ್ಲನಪುರ: ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಕ್ರಿಕೆಟ್ ಸರಣಿಯ ಎರಡನೇ ಪಂದ್ಯದಲ್ಲಿ ಟಾಸ್ ಗೆದ್ದಿರುವ ಭಾರತ, ಬೌಲಿಂಗ್ ಆಯ್ದುಕೊಂಡಿದೆ.

ಚಂಡೀಗಡ ಸಮೀಪದ ಮುಲ್ಲನಪುರದಲ್ಲಿರುವ ಪಂಜಾಬ್ ಕ್ರಿಕೆಟ್ ಸಂಸ್ಥೆಯ ಕ್ರೀಡಾಂಗಣದಲ್ಲಿ ಪಂದ್ಯ ನಡೆಯುತ್ತಿದೆ.

10 ಓವರ್ 1 ವಿಕೆಟ್ಗೆ 90 ರನ್

ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದಿರುವ ಆಫ್ರಿಕಾ ಪಡೆ 10 ಓವರ್ಗಳಲ್ಲಿ 1 ವಿಕೆಟ್ ನಷ್ಟಕ್ಕೆ 90 ರನ್ ಗಳಿಸಿದೆ.

ಕ್ವಿಂಟನ್ ಡಿ ಕಾಕ್ ಜೊತೆ ಇನಿಂಗ್ಸ್ ಆರಂಭಿಸಿದ ರೀಜಾ ಹೆಂಡ್ರಿಕ್ಸ್ 8 ರನ್ ಗಳಿಸಿದ್ದಾಗ, ವರುಣ್ ಚಕ್ರವರ್ತಿ ಬೌಲಿಂಗ್ನಲ್ಲಿ ವಿಕೆಟ್ ಒಪ್ಪಿಸಿದ್ದಾರೆ.

ಸದ್ಯ ಡಿ ಕಾಕ್ಗೆ ಜೊತೆಯಾಗಿರುವ ನಾಯಕ ಏಡನ್ ಮರ್ಕ್ರಂ (14), ಎರಡನೇ ವಿಕೆಟ್ ಪಾಲುದಾರಿಕೆಯಲ್ಲಿ ಅರ್ಧಶತಕದ ಜೊತೆಯಾಟವಾಡಿದ್ದಾರೆ.

ಬಿರುಸಿನ ಬ್ಯಾಟಿಂಗ್ ಮಾಡುತ್ತಿರುವ ಡಿ ಕಾಕ್, ಕೇವಲ 31 ಎಸೆತಗಳಲ್ಲಿ 5 ಸಿಕ್ಸರ್, 4 ಬೌಂಡರಿ ಸಹಿತ 62 ರನ್ ಗಳಿಸಿದ್ದಾರೆ. ಹೀಗಾಗಿ, ಹರಿಣಗಳು ಬೃಹತ್ ಮೊತ್ತ ಕಲೆಹಾಕುವ ಸಾಧ್ಯತೆ ಇದೆ.

ಜಯದ ಲೆಕ್ಕಾಚಾರ

ಕಟಕ್ನಲ್ಲಿ ನಡೆದ ಮೊದಲ ಪಂದ್ಯವನ್ನು 101 ರನ್ ಅಂತರದಿಂದ ಗೆದ್ದಿರುವ ಸೂರ್ಯಕುಮಾರ್ ಯಾದವ್ ಬಳಗ, ಜಯದ ಓಟ ಮುಂದುವರಿಸುವ ತವಕದಲ್ಲಿದೆ. ಆದರೆ, ಈ ಪಂದ್ಯವನ್ನು ಗೆದ್ದು ತಿರುಗೇಟು ನೀಡುವ ಲೆಕ್ಕಾಚಾರ ಪ್ರವಾಸಿ ಪಡೆಯದ್ದು. ಅದಕ್ಕಾಗಿ ಮೂರು ಬದಲಾವಣೆಯೊಂದಿಗೆ ಕಣಕ್ಕಿಳಿದಿದೆ.

ಯುವ ಆಟಗಾರ ಟ್ರಿಸ್ಟನ್ ಸ್ಟಬ್ಸ್, ಸ್ಪಿನ್ನರ್ ಕೇಶವ ಮಹಾರಾಜ್ ಮತ್ತು ಎನ್ರಿಚ್ ನೊಕಿಯೆ ಬದಲು ರೀಜಾ ಹೆಂಡ್ರಿಕ್ಸ್, ಜಾರ್ಜ್ ಲಿಂಡೆ ಮತ್ತು ಒಟ್ಟನೆಲ್ ಬಾರ್ಟ್ಮನ್ಗೆ ಸ್ಥಾನ ನೀಡಲಾಗಿದೆ.

ಭಾರತ ತಂಡದಲ್ಲಿ ಯಾವುದೇ ಬದಲಾವಣೆ ಇಲ್ಲ. ಆದರೆ, ಮೊದಲ ಪಂದ್ಯದಲ್ಲಿ ವಿಫಲವಾಗಿದ್ದ ಶುಭಮನ್ ಗಿಲ್ (4) ಹಾಗೂ ನಾಯಕ ಸೂರ್ಯ (12) ಲಯಕ್ಕೆ ಮರಳಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.